ಪ್ರಾದೇಶಿಕ ಭಾಷೆಯಲ್ಲಿ ವಿಮೆ ಮಾಹಿತಿ

7

ಪ್ರಾದೇಶಿಕ ಭಾಷೆಯಲ್ಲಿ ವಿಮೆ ಮಾಹಿತಿ

Published:
Updated:

ದ್ವಿಚಕ್ರ ವಾಹನ ಮಾಲೀಕರು ಸ್ಥಳೀಯ ಭಾಷೆಯಲ್ಲಿ ಆನ್‌ಲೈನ್‌ನಲ್ಲಿ ಮಾಹಿತಿ ಪಡೆಯಲು ಮತ್ತು ವಿಮೆ ಪಾಲಿಸಿ ಖರೀದಿಸಲು ಅನುವಾಗುವಂತೆ ವಿಮೆ ಸಂಸ್ಥೆ ‘ಪಾಲಿಸಿಬಜಾರ್‌ಡಾಟ್‌ಕಾಂ’ (Policybazaar.com) ಹೊಸ ಅಂತರ್ಜಾಲ ತಾಣ ಪ್ರಾರಂಭಿಸಿದೆ. ಈ ಉಪಕ್ರಮದ ಮೂಲಕ, ಮಾತೃಭಾಷೆಯಲ್ಲಿಯೇ ಇಂಟರ್‌ನೆಟ್‌ನಲ್ಲಿ ಮಾಹಿತಿ ಪಡೆಯಲು ಆದ್ಯತೆ ನೀಡುವ ದೊಡ್ಡ ಪ್ರಮಾಣದ ಗ್ರಾಹಕರನ್ನು ತಲುಪುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.

ಇಂಗ್ಲಿಷ್‌ನಲ್ಲಿ ಇರುವ ಮಾಹಿತಿಗಿಂತ ಸ್ಥಳೀಯ ಭಾಷೆಯೇ ಹೆಚ್ಚು ವಿಶ್ವಾಸಾರ್ಹ ಎನ್ನುವುದು ಪ್ರಾದೇಶಿಕ ಭಾಷೆಯಲ್ಲಿ ಮಾತನಾಡುವ ಇಂಟರ್ನೆಟ್‌ ಬಳಕೆದಾರರು ಭಾವಿಸಿದ್ದಾರೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ. 2021 ರ ಹೊತ್ತಿಗೆ ಕನ್ನಡ ಭಾಷೆಯನ್ನು ಬಳಸುವ ಇಂಟರ್ನೆಟ್ ಬಳಕೆದಾರರ ಸಂಖ್ಯೆ 2.5 ಕೋಟಿಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ.

ದ್ವಿಚಕ್ರ ವಾಹನದ ಮಾಲೀಕರಿಗೆ ಯಾವ ರೀತಿಯ ವಿಮೆ ಖರೀದಿಸಬೇಕು ಎಂದು ತಿಳಿಯುವುದು ಪ್ರಮುಖವಾಗಿದೆ. ಇದನ್ನು ತಮ್ಮ ಭಾಷೆಯಲ್ಲೇ ಓದಿದರೆ ಅವರಿಗೆ ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ. ಈ ಬಹುಭಾಷಾ ಪರಿಕ್ರಮವು ಭಾರತೀಯ ಭಾಷೆಯಲ್ಲಿ ಮಾತನಾಡುವವರಿಗೆ ವಾಹನ ವಿಮೆ ವಿವರಗಳು ಸುಲಭವಾಗಿಸಲಿದೆ. ವಿಮೆ ರದ್ದಾಗುವ ಸಮಸ್ಯೆಯನ್ನು ನಿವಾರಿಸುವುದಕ್ಕೂ ನಾವು ನೆರವಾಗಲಿದ್ದೇವೆ’ ಎಂದು ಸಂಸ್ಥೆಯ ಮುಖ್ಯ ವ್ಯವಹಾರ ಅಧಿಕಾರಿ ತರುಣ್‌ ಮಾಥುರ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !