ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ಬೇಡಿಕೆ ಮೇಲೆ ಬಡ್ಡಿ ಹೆಚ್ಚಳದ ಪರಿಣಾಮ ಸದ್ಯಕ್ಕಿಲ್ಲ: ಮಾರುತಿ

Last Updated 21 ಆಗಸ್ಟ್ 2022, 14:21 IST
ಅಕ್ಷರ ಗಾತ್ರ

ನವದೆಹಲಿ: ‘ಬಡ್ಡಿದರ ಹೆಚ್ಚಳವು ವಾಹನ ಬೇಡಿಕೆಯ ಮೇಲೆ ಇನ್ನೂ ಪರಿಣಾಮ ಬೀರಿಲ್ಲ. ಆದರೆ, ಸೆಮಿಕಂಡಕ್ಟರ್‌ ಕೊರತೆಯು ನಿವಾರಣೆ ಆದ ಬಳಿಕ ಮತ್ತು ತಯಾರಿಕೆ ಸಹಜ ಸ್ಥಿತಿಗೆ ಮರಳಿದ ನಂತರ ಬೇಡಿಕೆಯ ನಿಜವಾದ ಚಿತ್ರಣ ಸಿಗಲಿದೆ’ ಎಂದು ಮಾರುತಿ ಸುಜುಕಿ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಾಂಕ್‌ ಶ್ರೀವಾಸ್ತವ ಹೇಳಿದ್ದಾರೆ.

ಗ್ರ್ಯಾಂಡ್‌ ವಿಟಾರಾ ಮತ್ತು ಬ್ರೆಜಾದಂತಹ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದ ಬಳಿಕ ಗ್ರಾಹಕರಿಗೆ ವಿತರಣೆ ಮಾಡಬೇಕಿರುವ ವಾಹನಗಳ ಸಂಖ್ಯೆಯು ಕಳೆದ ತ್ರೈಮಾಸಿಕದಲ್ಲಿ 2.8 ಲಕ್ಷದಿಂದ 3.87 ಲಕ್ಷಕ್ಕೆ ಏರಿಕೆ ಆಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಆರ್‌ಬಿಐ ಆಗಸ್ಟ್‌ ತಿಂಗಳ ಮೊದಲ ವಾರದಲ್ಲಿ ರೆಪೊ ದರವನ್ನು ಶೇಕಡ 0.50ರಷ್ಟು ಹೆಚ್ಚಿಸಿದೆ. ಮೇ ತಿಂಗಳ ಬಳಿಕ ಮೂರನೇ ಬಾರಿಗೆ ರೆಪೊ ದರ ಏರಿಕೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT