ಮಂಗಳವಾರ, ಅಕ್ಟೋಬರ್ 27, 2020
24 °C

ಇನ್ವೆಸ್ಕೊ ಮ್ಯೂಚುವಲ್ ಫಂಡ್‍ನ ಹೊಸ ನಿಧಿ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಇನ್ವೆಸ್ಕೊ ಮ್ಯೂಚುವಲ್ ಫಂಡ್, ತನ್ನ ಹೊಸ ನಿಧಿ ಇನ್ವೆಸ್ಕೊ ಇಂಡಿಯಾ ಫೋಕಸ್ಡ್ 20 ಈಕ್ವಿಟಿ ಫಂಡ್ ಆರಂಭಿಸಿದೆ.

‘ಇದೊಂದು ನೀಡಿಕೆ ಮತ್ತು ಮರು ಖರೀದಿಯ (ಓಪನ್ ಎಂಡೆಡ್) ಈಕ್ವಿಟಿ ಸ್ಕೀಮ್ ಆಗಿದ್ದು, ಮಾರುಕಟ್ಟೆ ಮೌಲ್ಯದ ವಿವಿಧ ಶ್ರೇಣಿಗಳಲ್ಲಿನ ಗರಿಷ್ಠ 20 ಷೇರುಗಳಲ್ಲಿ ಹೂಡಿಕೆ ಮಾಡುವ ಮೂಲಕ ಬಂಡವಾಳದ ಮೌಲ್ಯವರ್ಧನೆ ಮಾಡಲಿದೆ’ ಎಂದು ಇನ್ವೆಸ್ಕೊ ಮ್ಯೂಚುವಲ್ ಫಂಡ್‍ನ ಸಿಇಒ ಸೌರಭ್ ನಾನಾವತಿ ಅವರು ಹೇಳಿದ್ದಾರೆ. 

ಕೊಡುಗೆ ಅವಧಿ: ಈ ಹೊಸ ನಿಧಿ ಕೊಡುಗೆಯು (ಎನ್‍ಎಫ್‍ಒ) ಹಣ ಹೂಡಿಕೆಗೆ ಸೆಪ್ಟೆಂಬರ್ 9ರಿಂದ ತೆರೆದುಕೊಳ್ಳಲಿದ್ದು, ಇದೇ 23ರಂದು ಕೊನೆಗೊಳ್ಳಲಿದೆ.

 ಕನಿಷ್ಠ ಹೂಡಿಕೆಯು ₹ 1,000 ಇರಲಿದೆ. ವ್ಯವಸ್ಥಿತ ಹೂಡಿಕೆ ಯೋಜನೆಯಡಿ (ಎಸ್‍ಐಪಿ- ಸಿಪ್) ಕನಿಷ್ಠ ಹೂಡಿಕೆಯು ₹ 500  ಇರಲಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು