ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆಗೆ ಚುನಾವಣೆವರೆಗೆ ಕಾಯದಿರಿ

Last Updated 22 ಜನವರಿ 2019, 19:30 IST
ಅಕ್ಷರ ಗಾತ್ರ

ಸ್ಥಳೀಯ ಮತ್ತು ಜಾಗತಿಕ ಆರ್ಥಿಕ ಬದಲಾವಣೆಗಳ ಪ್ರಭಾವದಿಂದಾಗಿ ಕೆಲವು ವಾರಗಳಿಂದ ಷೇರು ಮಾರುಕಟ್ಟೆಗಳಲ್ಲಿ ತೀವ್ರತರವಾದ ಏರಿಳಿತ ಕಂಡು ಬರುತ್ತಿದೆ. ಇಂತಹ ಏರಿಳಿತ ಅಥವಾ ಷೇರು ಮಾರುಕಟ್ಟೆಯ ಚಿತ್ತಚಾಂಚಲ್ಯತೆ ಮುಂದಿನ ಸಾರ್ವತ್ರಿಕ ಚುನಾವಣೆ ಮುಗಿಯುವವರೆಗೆ ಇರಲಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

ಈ ವಿಶ್ಲೇಷಣೆಗಳ ಹಿನ್ನೆಲೆಯಲ್ಲಿ ಹೂಡಿಕೆಗಾಗಿ ಮುಂದಿನ ಚುನಾವಣೆ ಮುಗಿಯುವವರೆಗೆ ನಾವು ಕಾದು ನೋಡಬೇಕೆ ಎಂದು ಹೂಡಿಕೆದಾರರು ಪ್ರಶ್ನಿಸುತ್ತಿದ್ದಾರೆ. ಆದರೆ, ಚುನಾವಣೆ ನಡೆಯುವ ಮೊದಲು, ಮುಗಿದ ನಂತರವೂ ಹೂಡಿಕೆ ಪ್ರಕ್ರಿಯೆ ಚಾಲನೆಯಲ್ಲಿ ಇಡುವುದು ಉತ್ತಮ ಎಂದು ವಿಶ್ಲೇಷಕರು ಹೇಳುತ್ತಾರೆ. ಚುನಾವಣೆ ಮುಗಿದ ನಂತರ ಷೇರು ಮಾರುಕಟ್ಟೆ ಪ್ರತಿಕ್ರಿಯೆ ಹೇಗಿತ್ತು ಎನ್ನುವ ಪ್ರಶ್ನೆಗೆ ಅಂಕಿ–ಅಂಶಗಳೇ ಉತ್ತರ ಹೇಳುತ್ತವೆ. ಚುನಾವಣೋತ್ತರದಲ್ಲಿ ಷೇರು ಮಾರುಕಟ್ಟೆ ಚುರುಕು ಪಡೆಯುತ್ತದೆ ಎಂಬ ವಾದಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ.

1996 ಮತ್ತು 1998ರ ಚುನಾವಣೆ ನಂತರ ಷೇರು ಮಾರುಕಟ್ಟೆ ಕುಸಿದಿದ್ದರೆ, 1999, 2004 ಮತ್ತು 2014ರಲ್ಲಿ ಸಾಧಾರಣ ಚೇತರಿಕೆ ಕಂಡಿತ್ತು. ಆದರೆ, 1991 ಮತ್ತು 2009ರ ಚುನಾವಣೆ ನಂತರ ಷೇರು ಮಾರುಕಟ್ಟೆಯಲ್ಲಿ ಅಗಾಧ ಚೇತರಿಕೆ ಕಾಣಿಸಿಕೊಂಡಿತ್ತು. 1991ರಲ್ಲಿ ಆರ್ಥಿಕ ಉದಾರೀಕರಣವು ವಿದೇಶ ಬಂಡವಾಳ ಹೂಡಿಕೆ ನೀತಿಗೆ ಉತ್ತೇಜನ ನೀಡಿದೆ. ಇದರಿಂದ ಮಾರುಕಟ್ಟೆ ಚೇತರಿಕೆಗೆ ಕಾರಣವಾಗಿದ್ದರೆ, 2008ರಲ್ಲಿ ಜಾಗತಿಕ ಆರ್ಥಿಕ ಕುಸಿತದ ನಂತರ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದರಿಂದ ಮಾರುಕಟ್ಟೆ ಸುಧಾರಿಸಿಕೊಂಡಿತ್ತು.

ಚುನಾವಣಾ ವರ್ಷ

ತಿಂಗಳು

ತಿಂಗಳಲ್ಲಿ ನಿಫ್ಟಿ

ಚುನಾವಣಾ ಮುನ್ನ 6 ತಿಂಗಳಲ್ಲಿ ನಿಫ್ಟಿ ಮಟ್ಟ ಮತ್ತು ಬದಲಾವಣೆ

6 ತಿಂಗಳ ಮುನ್ನ ಮತ್ತು ನಂತರ ನಿಫ್ಟಿಯಲ್ಲಾದ ಬದಲಾವಣೆ ಪ್ರಮಾಣ

​​

2014

ಮೇ

7,229

6,176​

17%

2009

ಮೇ

4,449

5,755;

61%

2004

ಮೇ 1,484 1,615 –8%

1999

ಅಕ್ಟೋಬರ್‌ 1,325 978 35%

1998

ಮಾರ್ಚ್‌ 1,117 1114 0%

1996

ಮೇ 1,090 862 26%

1991

ಜೂನ್‌ 392 319 23%

ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ 6 ತಿಂಗಳ ಅವಧಿಯಲ್ಲಿ ಸೆನ್ಸೆಕ್ಸ್‌ನಲ್ಲಿ ಆದ ಬದಲಾವಣೆಯನ್ನು ಅಂಕಿ–ಅಂಶಗಳ (ಪ್ರತ್ಯೇಕ ಪಟ್ಟಿ ಗಮನಿಸಿ) ಮೂಲಕ ತಿಳಿದುಕೊಳ್ಳಬಹುದು. ಚುನಾವಣಾ ಪೂರ್ವದಲ್ಲಿಯೇ ಸೆನ್ಸೆಕ್ಸ್‌ ಚೇತರಿಸಿಕೊಂಡ ಉದಾಹರಣೆಗಳೇ ಹೆಚ್ಚು. ಚುನಾವಣೆ ಪೂರ್ವದಲ್ಲಿ ಹೀಗಾಗುತ್ತದೆ, ನಂತರದಲ್ಲಿ ಹಾಗಾಗುತ್ತದೆ ಎಂಬುದೆಲ್ಲ ಊಹೆಗಳ ಆಟ. ದೊಡ್ಡ ಮಟ್ಟದಲ್ಲಿ ಏರಿಳಿತ ಕಂಡು ಬಂದರೆ ಈಕ್ವಿಟಿ ಮಾರ್ಕೆಟ್‌ನಲ್ಲಿ ಷೇರು ಖರೀದಿಸಬಹುದು. ಇದರಿಂದ ಘಟಕ ವೆಚ್ಚ (ಯುನಿಟ್‌ ಕಾಸ್ಟ್‌) ಕಡಿಮೆ ಮಾಡಿಕೊಳ್ಳಬಹುದು.

ಈ ವರ್ಷ, ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಮತ್ತು ಡಾಲರ್‌ ಮೌಲ್ಯ ಹೆಚ್ಚಾಗಿರುವುದರಿಂದ ಅದರ ಪರಿಣಾಮ ಭಾರತದ ಮಾರುಕಟ್ಟೆಯ ಮೇಲೂ ಆಗಲಿದೆ. ಇಂತಹ ಬೆಳವಣಿಗೆಗಳ ಕಡೆ ಗಮನ ಕೊಟ್ಟು ಹೂಡಿಕೆಯ ಮಾಡಬೇಕೆ ಬೇಡವೇ ಎಂಬುದನ್ನು ಯೋಚಿಸಬೇಕು. ಆದರೆ, ಚುನಾವಣೆಗಳಿಂದ ಯಾವುದೇ ದೊಡ್ಡ ಪರಿಣಾಮ ಉಂಟಾಗುವುದಿಲ್ಲ. ಈ ಅವಧಿಯಲ್ಲಿ ಹೂಡಿಕೆ ಮಾಡುವ ಬಗ್ಗೆ ಆತಂಕ ಪಡಬೇಕಾದ ಅಗತ್ಯವಿಲ್ಲ ಎನ್ನುತ್ತಾರೆ ವಿಶ್ಲೇಷಕರು.

(ಲೇಖಕ: ‘ಫಂಡ್ಸ್‌ಇಂಡಿಯಾಡಾಟ್‌ಕಾಂ’ನ ಪ್ರಧಾನ ಸಂಶೋಧನಾ ವಿಶ್ಲೇಷಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT