ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 3,500 ಕೋಟಿ ಹೂಡಿಕೆ: ಎಚ್‌ಪಿಎ

Last Updated 28 ಜುಲೈ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಹ್ಯೂಲೆಟ್‌ ಪೆಕಾರ್ಡ್‌ ಎಂಟರಪ್ರೈಸಸ್‌ (ಎಚ್‌ಪಿಇ) ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ₹ 3,500 ಕೋಟಿಗಳಷ್ಟು ಬಂಡವಾಳ ಹೂಡಿಕೆ ಮಾಡುವುದಾಗಿ ಪ್ರಕಟಿಸಿದೆ.

ಕಂಪನಿಯು ತನ್ನ ಕಾರ್ಯಾಚರಣೆ, ಉತ್ಪಾದನೆ, ಉದ್ಯೋಗಿಗಳ ಸಂಖ್ಯೆ ಹೆಚ್ಚಿಸಲು, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಸೇವೆಗಳ ರಫ್ತು ಹೆಚ್ಚಿಸಲು ಈ ಬಂಡವಾಳದ ನೆರವು ಪಡೆಯಲಿದೆ.

‘ಈ ಹೂಡಿಕೆಯು ಭಾರತವನ್ನು ಸಂಸ್ಥೆಯ ಜಾಗತಿಕ ವಹಿವಾಟಿಗೆ ಮಹತ್ವದ ಮಾರುಕಟ್ಟೆಯನ್ನಾಗಿ ಅಭಿವೃದ್ಧಿಪಡಿಸಲಿದೆ’ ಎಂದು ‘ಎಚ್‌ಪಿಇ’ನ ಸಿಇಒ ಆಂಟೊನಿಯೊ ಎನ್‌. ಹೇಳಿದ್ದಾರೆ.

ಬಂಡವಾಳ ಸಂಗ್ರಹ
ಬೆಂಗಳೂರು:
ಜಾಗತ್ತಿನ ಅತಿ ದೊಡ್ಡ ಕಲಿಕಾ ವೇದಿಕೆಯಾದ ಬ್ರೈನ್ಲಿ ಸಂಸ್ಥೆಯು₹ 210 ಕೋಟಿ ಬಂಡವಾಳ ಸಂಗ್ರಹಿಸಿದೆ.

‘ಭಾರತದಲ್ಲಿ ಕಲಿಕಾ ಸೌಲಭ್ಯ ಅಭಿವೃದ್ಧಿಪಡಿಸಲು ಈ ಬಂಡವಾಳದ ಸದ್ಬಳಕೆ ಮಾಡಿಕೊಳ್ಳಲಾಗುವುದು. ಗುಣಮಟ್ಟದ ಕಲಿಕೆಗೆ ವೇದಿಕೆ
ಸೃಷ್ಟಿಸಲಾಗುವುದು’ ಎಂದು ಸಂಸ್ಥೆಯ ಸಿಇಒ ಮೈಕಲ್ ಬೊರ್ಕೊವ್ಸ್ಕಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT