ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಲ್‌ ಎಸ್ಟೇಟ್‌ ಬಂಡವಾಳ ಹೂಡಿಕೆ ₹ 43,780 ಕೋಟಿ

Last Updated 20 ಡಿಸೆಂಬರ್ 2019, 20:20 IST
ಅಕ್ಷರ ಗಾತ್ರ

ನವದೆಹಲಿ: ದೇಶಿ ರಿಯಲ್‌ ಎಸ್ಟೇಟ್‌ ವಲಯದಲ್ಲಿ ಪ್ರಸಕ್ತ ಕ್ಯಾಲೆಂಡರ್‌ ವರ್ಷದಲ್ಲಿನ ಬಂಡವಾಳ ಹೂಡಿಕೆಯು ಶೇ 9ರಷ್ಟು ಹೆಚ್ಚಳಗೊಂಡು ₹ 43,780 ಕೋಟಿಗಳಿಗೆ ತಲುಪಿದೆ.

ವಿದೇಶಗಳಿಂದ ಗರಿಷ್ಠ ಪ್ರಮಾಣದಲ್ಲಿ ಬಂಡವಾಳ ಹೂಡಿಕೆಯಾಗಿರುವುದರಿಂದ ಈ ಹೆಚ್ಚಳ ಕಂಡುಬಂದಿದೆ ಎಂದು ಜಾಗತಿಕ ಆಸ್ತಿ ಸಲಹಾ ಸಂಸ್ಥೆ ಕೊಲಿಯರ್ಸ್‌ ತಿಳಿಸಿದೆ.

2018ಕ್ಕೆ ಹೋಲಿಸಿದರೆ 2019ರಲ್ಲಿ ಹೂಡಿಕೆ ಪ್ರಮಾಣವು ಶೇ 8.7ರಷ್ಟು ಹೆಚ್ಚಳ ದಾಖಲಿಸಿದೆ. ವಸತಿ ನಿರ್ಮಾಣ ಕ್ಷೇತ್ರದಲ್ಲಿ ಈ ವರ್ಷ ಹೂಡಿಕೆಯಾಗಿರುವ ಒಟ್ಟಾರೆ ಬಂಡವಾಳದಲ್ಲಿ ವಿದೇಶಿ ನಿಧಿಗಳ ಪಾಲು ಶೇ 78ರಷ್ಟಿದೆ.

ಕಚೇರಿಗಳ ನಿರ್ಮಾಣ ಕ್ಷೇತ್ರವು ಶೇ 46ರಷ್ಟು ಹೂಡಿಕೆ ಆಕರ್ಷಿಸಿದೆ. ಈ ವಲಯದಲ್ಲಿನ ಹೂಡಿಕೆ ಮೊತ್ತವು ₹ 20 ಸಾವಿರ ಕೋಟಿಗಳಷ್ಟಿದೆ.

ಮುಂಬೈ, ದೆಹಲಿ ಎನ್‌ಸಿಆರ್‌ ಜತೆಗೆ ಬೆಂಗಳೂರು ಕೂಡ ಅತ್ಯಂತ ಆಕರ್ಷಕ ಹೂಡಿಕೆ ಮಾರುಕಟ್ಟೆಯಾಗಿ ನಿರಂತರವಾಗಿ ಗಮನ ಸೆಳೆಯುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

2020ರಲ್ಲಿ ₹ 46,170 ಕೋಟಿ ಮೊತ್ತದ ಬಂಡವಾಳದ ಒಳ ಹರಿವು ಇರಲಿದೆ ಎಂದು ಕೊಲಿಯರ್ಸ್‌ ಅಂದಾಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT