ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 1 ಲಕ್ಷ ಕೋಟಿ ಹೂಡಿಕೆ ಮಾಡಲಿರುವ ಐಒಸಿ

Last Updated 27 ಆಗಸ್ಟ್ 2021, 11:23 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಮುಂದಿನ ನಾಲ್ಕರಿಂದ ಐದು ವರ್ಷಗಳಲ್ಲಿ ಒಟ್ಟು ₹ 1 ಲಕ್ಷ ಕೋಟಿ ಹೂಡಿಕೆ ಮಾಡಲಿದೆ. ತೈಲ ಸಂಸ್ಕರಣಾ ಸಾಮರ್ಥ್ಯ ಹೆಚ್ಚಿಸಲು ಕಂಪನಿಯು ಈ ಹೂಡಿಕೆ ಮಾಡಲಿದ್ದು, ಕೆಲವು ವರ್ಷಗಳವರೆಗೆ ತೈಲ ಬೇಡಿಕೆ ಹೆಚ್ಚುತ್ತ ಸಾಗಲಿದೆ ಎಂದು ಅಂದಾಜಿಸಿದೆ.

ಪೆಟ್ರೋಲ್ ಬೇಡಿಕೆಯು ಕೋವಿಡ್‌ ಪೂರ್ವದ ಸ್ಥಿತಿಗೆ ಈಗಾಗಲೇ ಬಂದಿದೆ. ಡೀಸೆಲ್ ಬೇಡಿಕೆಯು ದೀಪಾವಳಿ ಹಬ್ಬದ ಹೊತ್ತಿಗೆ ಕೋವಿಡ್‌ಗೂ ಮೊದಲಿನ ಹಂತವನ್ನು ತಲುಪಬಹುದು ಎಂದು ಕಂಪನಿಯ ಅಧ್ಯಕ್ಷ ಎಸ್.ಎಂ. ವೈದ್ಯ ಅವರು ಷೇರುದಾರರ ವಾರ್ಷಿಕ ಸಭೆಯಲ್ಲಿ ಹೇಳಿದರು. ‘ದೇಶವು ಈಗ 25 ಕೋಟಿ ಟನ್ ತೈಲ ಬಳಕೆ ಮಾಡುತ್ತಿದೆ. ಇದು 2040ರ ವೇಳೆಗೆ 40 ಕೋಟಿಯಿಂದ 50 ಕೋಟಿ ಟನ್‌ವರೆಗೆ ಹೆಚ್ಚಲಿದೆ ಎಂದು ಬೇರೆ ಬೇರೆ ಸಂಸ್ಥೆಗಳು ಅಂದಾಜಿಸಿವೆ’ ಎಂದರು.

ಹೆಚ್ಚಲಿರುವ ಬೇಡಿಕೆಗೆ ಸ್ಪಂದಿಸಲು ಕಂಪನಿಯು ಹೊಸ ಯೋಜನೆಗಳನ್ನು ಶುರು ಮಾಡುತ್ತಿದೆ ಎಂದು ವೈದ್ಯ ತಿಳಿಸಿದರು. ಕಚ್ಚಾ ತೈಲವನ್ನು ಪೆಟ್ರೋಲ್, ಡೀಸೆಲ್ ಆಗಿ ಪರಿವರ್ತಿಸುವ ಒಟ್ಟು 11 ತೈಲ ಸಂಸ್ಕರಣಾಗಾರಗಳನ್ನು ಇಂಡಿಯನ್ ಆಯಿಲ್ ಕಂಪನಿ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT