ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಆರ್‌ಸಿಟಿಸಿ, ಐಆರ್‌ಎಫ್‌ಸಿ ಐಪಿಒ₹ 1,500 ಕೋಟಿ ಸಂಗ್ರಹ ನಿರೀಕ್ಷೆ

Last Updated 17 ಏಪ್ರಿಲ್ 2019, 17:52 IST
ಅಕ್ಷರ ಗಾತ್ರ

ನವದೆಹಲಿ: ಐಆರ್‌ಸಿಟಿಸಿ ಮತ್ತು ಐಆರ್‌ಎಫ್‌ಸಿ ಕಂಪನಿಗಳ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಸೆಪ್ಟೆಂಬರ್‌ ವೇಳೆಗೆ ₹ 1,500 ಕೋಟಿ ಸಂಗ್ರಹಿಸುವ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಹೊಂದಿದೆ.

ಎರಡೂ ಕಂಪನಿಗಳ ‘ಐಪಿಒ’ ಪ್ರಕ್ರಿಯೆಗೆ ಹಣಕಾಸು ಸಚಿವಾಲಯ ಈಗಾಗಲೇ ಚಾಲನೆ ನೀಡಿದೆ. ಷೇರುಪೇಟೆಯಲ್ಲಿ ನೋಂದಣಿಯಾದರೆ ಸಾಲದ ಮೇಲಿನ ವೆಚ್ಚದಲ್ಲಿ ಏರಿಕೆ ಆಗಲಿದೆ ಎಂದು ಈ ಕಂಪನಿಗಳು ರೈಲ್ವೆ ಸಚಿವಾಲಯಕ್ಕೆ ತಿಳಿಸಿವೆ ಎಂದು ಮೂಲಗಳು ಹೇಳಿವೆ. ಈ ಬಗ್ಗೆ ಕೇಂದ್ರ ಸಚಿವ ಸಂಪುಟ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಐಪಿಒಗೆ ಸಂಬಂಧಿಸಿದ ಕರಡು ಪ್ರತಿಯನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಶೀಘ್ರವೇ ಸಲ್ಲಿಸಲಾಗುವುದು. ಚುನಾವಣೆಯ ಬಳಿಕ ಅಧಿಕಾರಕ್ಕೆ ಬರಲಿರುವ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.

ರೇಲ್‌ ವಿಕಾಸ್‌ ನಿಗಮ ನಿಯಮಿತದಲ್ಲಿದ್ದ (ಆರ್‌ವಿಎನ್‌ಎಲ್‌) ಶೇ 12.12ರಷ್ಟು ಷೇರುಗಳನ್ನು ವಿಕ್ರಯಿಸುವ ಮೂಲಕ ₹ 480 ಕೋಟಿ ಸಂಗ್ರಹಿಸಲಾಗಿದೆ.

2017ರ ಏಪ್ರಿಲ್‌ನಲ್ಲಿ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ಐಆರ್‌ಸಿಒಎನ್‌ ಇಂಟರ್‌ನ್ಯಾಷನಲ್‌, ಆರ್‌ಐಟಿಇಎಸ್‌, ಆರ್‌ವಿಎನ್‌ಎಲ್‌, ಐಆರ್‌ಎಫ್‌ಸಿ ಮತ್ತು ಐಆರ್‌ಟಿಸಿ ಕಂಪನಿಗಳನ್ನು ಷೇರುಪೇಟೆಯಲ್ಲಿ ನೋಂದಾಯಿಸಲು ಅನುಮತಿ ನೀಡಿತ್ತು. ಇದರಲ್ಲಿ ಐಆರ್‌ಸಿಒಎನ್‌ ಇಂಟರ್‌ನ್ಯಾಷನಲ್‌ ಮತ್ತು ಆರ್‌ಐಟಿಇಎಸ್‌ 2018–10ನೇ ಹಣಕಾಸು ವರ್ಷದಲ್ಲಿ ಷೇರುಪೇಟೆಗೆ ಪ್ರವೇಶ ಪಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT