ಬುಧವಾರ, ನವೆಂಬರ್ 13, 2019
22 °C
ಒಂದೇ ದಿನ ಶೇ 129ರಷ್ಟು ಜಿಗಿತ: ಪ್ರತಿ ಷೇರಿನ ಬೆಲೆ ₹ 728.60

ಐಆರ್‌ಸಿಟಿಸಿ ಷೇರು: ಭಾರಿ ಗಳಿಕೆ

Published:
Updated:

ನವದೆಹಲಿ: ಭಾರತೀಯ ರೈಲ್ವೆ ಕೇಟರಿಂಗ್‌ ಮತ್ತು ಪ್ರವಾಸೋದ್ಯಮ ನಿಗಮದ (ಐಆರ್‌ಸಿಟಿಸಿ) ಷೇರುಗಳು ಸೋಮವಾರ ಭರ್ಜರಿ ವಹಿವಾಟು ಕಂಡವು. 

ಪ್ರತಿ ಷೇರಿಗೆ ನೀಡಿಕೆ ಬೆಲೆ ₹ 320 ನಿಗದಿಪಡಿಸಲಾಗಿತ್ತು. ಆದರೆ ಅದಕ್ಕಿಂತಲೂ ಶೇ 127ರಷ್ಟು ಹೆಚ್ಚು ಅಂದರೆ ಪ್ರತಿ ಷೇರು ₹ 728.60ರಂತೆ ಮಾರಾಟವಾಯಿತು. ಇದರಿಂದ ಷೇರು ವಿಕ್ರಯಕ್ಕೆ ಉತ್ತೇಜನ ದೊರೆತಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

 ವಹಿವಾಟಿಗೆ ಪ್ರವೇಶಿಸಿದ ಮೊದಲ ದಿನವೇ ಷೇರುಗಳ ಬೆಲೆಯಲ್ಲಿ ಗರಿಷ್ಠ ಏರಿಕೆ ಕಂಡ ಎರಡನೇ ಕಂಪನಿ ಎನ್ನುವ ಹೆಗ್ಗಳಿಕೆಯನ್ನೂ ಐಆರ್‌ಸಿಟಿಸಿ ತನ್ನದಾಗಿಸಿಕೊಂಡಿದೆ. ಐಆರ್‌ಸಿಟಿಸಿನ ಮಾರುಕಟ್ಟೆ ಮೌಲ್ಯ ಈಗ ₹ 11,657.60 ಕೋಟಿಗಳಿಗೆ ತಲುಪಿದೆ. 2017ರ ಜುಲೈನಲ್ಲಿ ಸಾಲ್ಸರ್‌ ಎಂಜಿನಿಯರಿಂಗ್‌ ಷೇರುಗಳು ಶೇ 142ರಷ್ಟು ಜಿಗಿತ ಕಂಡಿದ್ದವು. 

**

ಇದೊಂದು ಐತಿಹಾಸಿಕ ಕ್ಷಣ. ನೋಂದಣಿ ಆಗದ ದಿನವೇ ಈ ರೀತಿಯ ಯಶಸ್ಸು ಸಾಧಿಸಿದ ಮೊದಲ ಕೇಂದ್ರೋದ್ಯಮವಾಗಿದೆ
- ಎಂ.ಪಿ. ಮಲ್ಲ, ಐಆರ್‌ಸಿಟಿಸಿ ಅಧ್ಯಕ್ಷ

**

ಗುಣಮಟ್ಟದ ಸೇವೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ
- ಪಿ.ಎಸ್‌.ಮಿಶ್ರಾ, ರೈಲ್ವೆ ಮಂಡಳಿ ಸದಸ್ಯ

ಪ್ರತಿಕ್ರಿಯಿಸಿ (+)