ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಪ್‌ ಕಾರ್ಡ್‌: ಕೆನರಾ ಬ್ಯಾಂಕ್‌ ಸ್ಪಷ್ಟನೆ

Last Updated 20 ಡಿಸೆಂಬರ್ 2018, 19:42 IST
ಅಕ್ಷರ ಗಾತ್ರ

ಬೆಂಗಳೂರು: ಇಎಂವಿ ಚಿಪ್‌ ಆಧಾರಿತ ಡೆಬಿಟ್‌ ಕಾರ್ಡ್‌ಗಳನ್ನು ಬ್ಯಾಂಕ್‌ನ ಶಾಖೆಗಳಲ್ಲಿ ಗ್ರಾಹಕರಿಗೆ ಯಾವುದೇ ತೊಂದರೆ ಇಲ್ಲದೆ ತ್ವರಿತವಾಗಿ ವಿತರಿಸಲಾಗುತ್ತಿದೆ ಎಂದು ಕೆನರಾ ಬ್ಯಾಂಕ್‌ ತಿಳಿಸಿದೆ.

ಕಾರ್ಡ್‌ ಮೇಲೆ ಹೆಸರು ಮುದ್ರಿಸಿರುವ ಇಂತಹ ಕಾರ್ಡ್‌ಗಳನ್ನು ಒಂದು ವಾರದ ಒಳಗೆ ಗ್ರಾಹಕರ ಮನೆ ವಿಳಾಸಕ್ಕೆ ತಲುಪಿಸಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ವಿಳಂಬ ಆಗುತ್ತಿಲ್ಲ. ಗ್ರಾಹಕರು ಇಂಟರ್‌ನೆಟ್‌ ಬ್ಯಾಂಕಿಂಗ್‌ ಮೂಲಕವೂ (https://canarabankcsis.in/dc) ಇವಿಎಂ ಚಿಪ್‌ ಡೆಬಿಟ್‌ ಕಾರ್ಡ್‌ಗೆ ಕೋರಿಕೆ ಸಲ್ಲಿಸಬಹುದು ಎಂದು ಬ್ಯಾಂಕ್‌ನ ಡೆಪ್ಯುಟಿ ಜನರಲ್‌ ಮ್ಯಾನೇಜರ್‌ ಟಿ. ಜಿ. ಬೋರಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT