ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಯೂಟರ್‌ಗಳಿಗೆ ಬೇಡಿಕೆ ಕುಸಿತ: 6000 ಮಂದಿಯ ವಜಾಕ್ಕೆ ಮುಂದಾದ ಎಚ್‌ಪಿ

Last Updated 23 ನವೆಂಬರ್ 2022, 9:55 IST
ಅಕ್ಷರ ಗಾತ್ರ

ನವದೆಹಲಿ: ಟೆಕ್‌ ಕಂಪನಿಗಳಲ್ಲಿ ಆರಂಭವಾಗಿರುವ ಉದ್ಯೋಗ ಕಡಿತದ ಸರಪಳಿ ಮುಂದುವರಿದಿದ್ದು, ಇದೀಗ 6,000 ನೌಕರರನ್ನು ವಜಾ ಮಾಡುವುದಾಗಿ ಎಚ್‌ಪಿ (ಹೆವ್ಲೆಟ್‌–ಪ್ಯಾಕರ್ಡ್‌) ಹೇಳಿದೆ.

2025ರ ಹಣಕಾಸು ವರ್ಷದ ಅಂತ್ಯಕ್ಕೆ ಇಷ್ಟು ಮಂದಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಯೋಜನೆಯನ್ನು ಎಚ್‌ಪಿ ಹಾಕಿಕೊಂಡಿದೆ.

ವಾಣಿಜ್ಯ ಹಾಗೂ ವೈಯಕ್ತಿಕ ಕಂಪ್ಯೂಟರ್‌ ಮಾರಾಟ ಕುಸಿತ ಕಂಡಿದ್ದು, ಹೀಗಾಗಿ ನೌಕರರ ವಜಾಕ್ಕೆ ಎಚ್‌ಪಿ ಮುಂದಾಗಿದೆ. ಸದ್ಯ 50,000 ನೌಕರರಿದ್ದು, ಈ ಪೈಕಿ 4,000 ದಿಂದ 6,000 ಮಂದಿಯನ್ನು ವಜಾ ಮಾಡಲು ಎಚ್‌ಪಿ ನಿರ್ಧಾರ ಮಾಡಿದೆ.

‘ಮೊದಲ ತ್ರೈಮಾಸಿಕದಲ್ಲಿ ಕಂಪನಿಯ ಆದಾಯ ಕುಸಿದಿದೆ. 2022ರ ಹಣಕಾಸು ವರ್ಷದಲ್ಲಿ ಹಲವು ಬದಲಾವಣೆಗಳನ್ನು ಕಂಪನಿ ಕಂಡಿದೆ. 2023ರಲ್ಲೂ ಅದು ಮುಂದುವರಿಯುವ ಸಾಧ್ಯತೆ ಇದೆ‘ ಎಂದು ಎಚ್‌ಪಿಯ ಹಣಕಾಸು ವಿಭಾಗದ ಮುಖ್ಯಸ್ಥ ಮಾರಿ ಮೇರ್ಸ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT