ನವದೆಹಲಿ: ನೌಕರರನ್ನು ಕೆಲಸದಿಂದ ತೆಗೆಯುವ ಬದಲು, ಅವರಿಗೆ ಹೊಸದಾಗಿ ಕೌಶಲ ತರಬೇತಿ ನೀಡುವುದನ್ನು ಆದ್ಯತೆ ಆಗಿಸಿ ಕೊಳ್ಳಬೇಕು ಎಂದು ಐ.ಟಿ. ವಲಯದ ನೌಕರರ ಸಂಘಟನೆ ಎನ್ಐಟಿಇಎಸ್, ಕಂಪನಿಗಳಿಗೆ ಮನವಿ ಮಾಡಿದೆ.

ತಂತ್ರಜ್ಞಾನ ವಲಯದ ಕಂಪನಿಗಳ ಲಾಭದ ಪ್ರಮಾಣ ಚೆನ್ನಾಗಿಯೇ ಇದ್ದರೂ, ಉದ್ಯೋಗದ ಭದ್ರತೆ ದುರ್ಬಲಗೊಳ್ಳುತ್ತಿರುವುದು ಕಾರ್ಪೊರೇಟ್ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಸಂಘಟನೆ ಹೇಳಿದೆ.

‘ಕಂಪನಿಗಳು ಎ.ಐ (ಕೃತಕ ಬುದ್ಧಿಮತ್ತೆ) ಮೇಲೆ ಹೂಡಿಕೆ ಮಾಡುತ್ತಿವೆ ಎಂದಾದರೆ ಅವು ತಮ್ಮ ನೌಕರರಿಗೆ ಹೊಸ ಕೌಶಲ ಕಲಿಸುವುದರ ಮೇಲೆಯೂ ಹೂಡಿಕೆ ಮಾಡಬೇಕು’ ಎಂದು ಸಂಘಟನೆಯ ಅಧ್ಯಕ್ಷ ಹರಪ್ರೀತ್ ಸಿಂಗ್ ಸಲುಜಾ ಒತ್ತಾಯಿಸಿದ್ದಾರೆ.

ಕೆಲಸದಿಂದ ತೆಗೆಯುವುದು ಕಡೆಯ ಆಯ್ಕೆಯಾಗಿರಬೇಕು, ಅದು ಮೊದಲ ಆಯ್ಕೆ ಆಗಬಾರದು. ನೀತಿ ನಿರೂಪಕರು ನೌಕರರ ರಕ್ಷಣೆಗೆ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು. ಕೆಲಸದಿಂದ ನೌಕರರನ್ನು ತೆಗೆಯುವುದಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾದ ನಿಯಮಗಳು ಇರಬೇಕು, ನ್ಯಾಯಸಮ್ಮತವಾದ ಪರಿಹಾರ ಮೊತ್ತವನ್ನು ನೌಕರರಿಗೆ ನೀಡಬೇಕು, ಉದ್ಯೋಗದಾತರು ಉತ್ತರದಾಯಿತ್ವ ಪ್ರದರ್ಶಿಸಬೇಕು ಎಂದು ಹೇಳಿದ್ದಾರೆ.

‘ನೌಕರರನ್ನು ಸಾಮೂಹಿಕವಾಗಿ ಕೆಲಸದಿಂದ ತೆಗೆಯುವಾಗ ಉತ್ತರದಾಯಿತ್ವ ಇರಬೇಕು. ನೌಕರರು ತಮ್ಮ ಹಕ್ಕುಗಳ ಬಗ್ಗೆ ಅರಿತುಕೊಳ್ಳಬೇಕು, ತಮ್ಮ ಕೌಶಲವನ್ನು ನಿರಂತರವಾಗಿ ಹೆಚ್ಚು ಮಾಡಿಕೊಳ್ಳುತ್ತ ಇರಬೇಕು’ ಎಂದು ಅವರು ಕಿವಿಮಾತು ಹೇಳಿದ್ದಾರೆ.

‘ನ್ಯಾಯಸಮ್ಮತವಲ್ಲದ ಬಗೆಯಲ್ಲಿ ನೌಕರರನ್ನು ಕೆಲಸದಿಂದ ತೆಗೆಯುವ ವಿಚಾರವನ್ನು, ಒತ್ತಾಯದಿಂದ ಸಾಮೂಹಿಕವಾಗಿ ರಾಜೀನಾಮೆ ಪಡೆಯುವುದನ್ನು, ಕಾನೂನು ಪ್ರಕ್ರಿಯೆಯ ಪಾಲನೆ ಆಗದೆ ಇರುವುದನ್ನು ನಾವು ಸರ್ಕಾರಿ ಅಧಿಕಾರಿಗಳ ಮುಂದೆ ಪ್ರಸ್ತಾಪಿಸುತ್ತಲೇ ಇದ್ದೇವೆ. ಇನ್ನು ಮುಂದೆ ನಾವು ನಿಯಮಗಳಲ್ಲಿ ಬದಲಾವಣೆಗೆ, ನಿಯಮಗಳ ಕಟ್ಟುನಿಟ್ಟಿನ ಜಾರಿಗೆ, ನೌಕರರನ್ನು ರಕ್ಷಿಸುವುದಕ್ಕೆ ವ್ಯವಸ್ಥಿತ ಚೌಕಟ್ಟು ರೂಪುಗೊಳ್ಳಬೇಕು ಎಂಬುದರ ಬಗ್ಗೆ ಕೆಲಸ ಮಾಡಲಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ತಂತ್ರಜ್ಞಾನ ವಲಯದ ಉದ್ದಿಮೆಗಳು ನೌಕರರ ಸಂಖ್ಯೆ ಕಡಿಮೆ ಮಾಡುತ್ತಿವೆ. ಒರ್ಯಾಕಲ್, ಗೂಗಲ್, ಮೆಟಾ ತಮ್ಮಲ್ಲಿನ ಉದ್ಯೋಗಿಗಳ ಸಂಖ್ಯೆ ತಗ್ಗಿಸಿವೆ. ಈಚೆಗೆ ಒರ್ಯಾಕಲ್ ಕಂಪನಿ ಭಾರತದಲ್ಲಿ 12 ಸಾವಿರ ನೌಕರರನ್ನು ಕೆಲಸದಿಂದ ತೆಗೆದಿದೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.