ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಸಿ ಲಾಭ ₹ 3,587 ಕೋಟಿ

Last Updated 12 ಫೆಬ್ರುವರಿ 2021, 18:19 IST
ಅಕ್ಷರ ಗಾತ್ರ

ನವದೆಹಲಿ: ಬಹುರಾಷ್ಟ್ರೀಯ ಕಂಪನಿಯಾಗಿರುವ ಐಟಿಸಿ, ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ₹ 3,587 ಕೋಟಿ ನಿವ್ವಳ ಲಾಭ ಗಳಿಸಿದೆ.

ಕಂಪನಿಯ ಆದಾಯವು ₹ 14,124 ಕೋಟಿ ಆಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಆದಾಯವು 13,307 ಕೋಟಿ ಆಗಿತ್ತು ಎಂದು ಕಂಪನಿ
ತಿಳಿಸಿದೆ.

ಕಂಪನಿಯು ಹಾಲಿ ಹಣಕಾಸು ವರ್ಷದಲ್ಲಿ ತನ್ನ ಷೇರುದಾರರಿಗೆ ಪ್ರತಿ ಷೇರಿಗೆ ₹ 5ರಂತೆ ಮಧ್ಯಂತರ ಡಿವಿಡೆಂಡ್‌ ಕೂಡ
ಪ್ರಕಟಿಸಿದೆ. ಡಿಸೆಂಬರ್‌ ತ್ರೈಮಾಸಿಕದಲ್ಲಿ ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ ವಸ್ತುಗಳ (ಎಫ್‌ಎಂಸಿಜಿ) ಮಾರಾಟದಿಂದ ಬರುವ ಆದಾಯದಲ್ಲಿ ಹೆಚ್ಚಳ ಆಗಿದೆ. 2020ರ ಡಿಸೆಂಬರ್‌ ತ್ರೈಮಾಸಿಕದಲ್ಲಿ ಎಫ್‌ಎಂಸಿಜಿ ಆದಾಯ ₹ 9,843 ಕೋಟಿ. ಇದು ಹಿಂದಿನ ವರ್ಷದಲ್ಲಿ ₹ 9,265 ಕೋಟಿ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT