ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಸಿ: ₹ 2,955 ಕೋಟಿ ಲಾಭ

Last Updated 26 ಅಕ್ಟೋಬರ್ 2018, 17:42 IST
ಅಕ್ಷರ ಗಾತ್ರ

ಬೆಂಗಳೂರು: ವೈವಿಧ್ಯಮಯ ಉತ್ಪನ್ನಗಳನ್ನು ತಯಾರಿಸುವ ಉದ್ದಿಮೆ ಸಮೂಹ ಐಟಿಸಿ ಲಿಮಿಟೆಡ್‌, ಪ್ರಸಕ್ತ ಹಣಕಾಸು ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿ ₹ 2,955 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿ ಶೇ 12ರಷ್ಟು ಏರಿಕೆ ದಾಖಲಿಸಿದೆ.

ಈ ಅವಧಿಯಲ್ಲಿನ ಒಟ್ಟಾರೆ ವರಮಾನವು ₹ 11,095 ಕೋಟಿಗಳಷ್ಟಿದ್ದು, ಶೇ 14ರಷ್ಟು ಏರಿಕೆ ಕಂಡಿದೆ. ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ ಉತ್ಪನ್ನ (ಸಿಗರೇಟ್‌ ಹೊರತುಪಡಿಸಿ), ಕೃಷಿ ಮತ್ತು ಹೋಟೆಲ್‌ ಉದ್ದಿಮೆಯಲ್ಲಿನ ವಹಿವಾಟು ಹೆಚ್ಚಳಗೊಂಡಿದೆ ಎಂದು ಸಂಸ್ಥೆ ತಿಳಿಸಿದೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ನೇಮಕ

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಇಒ) ಸತೀಶ್ ಕುಮಾರ್ ಗುಪ್ತ ಅವರು ಅಧಿಕಾರವಹಿಸಿಕೊಂಡಿದ್ದಾರೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್, ಶೂನ್ಯ ಠೇವಣಿ ಖಾತೆ ಮತ್ತು ಡಿಜಿಟಲ್ ವಹಿವಾಟುಗಳ ಸೇವೆಯನ್ನು ಶುಲ್ಕರಹಿತವಾಗಿ ಒದಗಿಸುತ್ತಿದೆ.

ವಹಿವಾಟು ವೃದ್ಧಿ

ಉದ್ದಿಮೆಗಳಿಗೆ ಡಿಜಿಟಲ್‌ ವಿಶ್ಲೇಷಣೆ ಮತ್ತು ಮಾಹಿತಿ ಶೋಧದ ಸೇವೆ ಒದಗಿಸುವ ಥಾಟ್‌ಸ್ಪಾಟ್‌, ವಹಿವಾಟು ವಿಸ್ತರಣೆಗೆ ₹ 1008 ಕೋಟಿಗಳಷ್ಟು ಹೊಸ ಹೂಡಿಕೆ ಮಾಡಲಿದೆ. ಈ ಬಂಡವಾಳದ ನೆರವಿನಿಂದ ಬೆಂಗಳೂರಿನ ಕಚೇರಿಯ ಸಿಬ್ಬಂದಿ ಸಂಖ್ಯೆ ಮತ್ತು ಕೃತಕಬುದ್ಧಿಮತ್ತೆ, ಮಷಿನ್‌ ಲರ್ನಿಂಗ್‌ ಸಾಮರ್ಥ್ಯ ಹೆಚ್ಚಿಸಲು ಉದ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT