ಗುರುವಾರ , ಆಗಸ್ಟ್ 22, 2019
26 °C

ಐಟಿಸಿ ಲಾಭ ₹ 3,436 ಕೋಟಿ

Published:
Updated:

ನವದೆಹಲಿ: ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಐಟಿಸಿ ಲಿಮಿಟೆಡ್‌ನ ನಿವ್ವಳ ಲಾಭ ಶೇ 12.69ರಷ್ಟು ಹೆಚ್ಚಾಗಿ ₹ 3,436 ಕೋಟಿಗೆ ತಲುಪಿದೆ.

ಎಫ್‌ಎಂಸಿಜಿ ಮತ್ತು ಕೃಷಿಗೆ ಸಂಬಂಧಿಸಿದ ವಹಿವಾಟಿನಲ್ಲಿ ಏರಿಕೆ ಆಗಿರುವುದರಿಂದ ನಿವ್ವಳ ಲಾಭದಲ್ಲಿ ಏರಿಕೆಯಾಗಿದೆ ಎಂದು ಕಂಪನಿ ತಿಳಿಸಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ನಿವ್ವಳ ಲಾಭ ₹ 3,049 ಕೋಟಿ ಇತ್ತು.

ನಿವ್ವಳ ಮಾರಾಟ ₹ 11,746 ಕೋಟಿಯಿಂದ ₹ 12,532 ಕೋಟಿಗೆ ಶೇ 6.69ರಷ್ಟು ಏರಿಕೆಯಾಗಿದೆ.

 

Post Comments (+)