ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಸಿ ಲಾಭ ಶೇ 11.60 ಏರಿಕೆ

Last Updated 19 ಮೇ 2022, 13:14 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಐಟಿಸಿ ಲಿಮಿಟೆಡ್‌ನ ಮಾರ್ಚ್‌ ತ್ರೈಮಾಸಿಕದ ಒಟ್ಟು ನಿವ್ವಳ ಲಾಭದಲ್ಲಿ ಶೇಕಡ 11.60ರಷ್ಟು ಏರಿಕೆ ಆಗಿದ್ದು, ₹ 4,259 ಕೋಟಿಗೆ ತಲುಪಿದೆ.

ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು ₹ 3,816 ಕೋಟಿ ಲಾಭ ಗಳಿಸಿತ್ತು. 2021–22ರ ಮಾರ್ಚ್‌ ತ್ರೈಮಾಸಿಕದಲ್ಲಿ ನಿವ್ವಳ ಕಾರ್ಯಾಚರಣೆ ವರಮಾನವು ₹ 17,754 ಕೋಟಿಗೆ ಏರಿಕೆಯಾಗಿದೆ. ಹಿಂದಿನ ಸಾಲಿನಲ್ಲಿ ಇದು ₹ 15,404 ಕೋಟಿ ಆಗಿತ್ತು. ಕಂಪನಿಯು ಈ ವಿವರವನ್ನು ಷೇರುಪೇಟೆಗೆ ಬುಧವಾರ ತಿಳಿಸಿದೆ.

ಮಾರ್ಚ್‌ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಕಂಪನಿಯ ನಿವ್ವಳ ಲಾಭವು ₹ 15,485 ಕೋಟಿ ಆಗಿದೆ. ಕಂಪನಿಯ ಆಡಳಿತ ಮಂಡಳಿಯು ಷೇರುದಾರರಿಗೆ ಪ್ರತಿ ಷೇರಿಗೆ ₹ 6.25ರಂತೆ ಅಂತಿಮ ಲಾಭಾಂಶ ನೀಡಲು ಶಿಫಾರಸು ಮಾಡಿದೆ. ಈ ಮೊದಲು ಕಂಪನಿಯು ಪ್ರತಿ ಷೇರಿಗೆ ₹ 5.25ರಷ್ಟು ಮಧ್ಯಂತರ ಲಾಭಾಂಶ ನೀಡಿತ್ತು. ಇದರಿಂದಾಗಿ ಇಡೀ ಆರ್ಥಿಕ ವರ್ಷಕ್ಕೆ ಕಂಪನಿಯು ₹ 11.50ರಷ್ಟು ಲಾಭಾಂಶ ನೀಡಿದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT