ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಸಿ ನಿವ್ವಳ ಲಾಭ ಶೇಕಡ 15ರಷ್ಟು ಏರಿಕೆ

Last Updated 4 ಫೆಬ್ರುವರಿ 2022, 14:52 IST
ಅಕ್ಷರ ಗಾತ್ರ

ನವದೆಹಲಿ: ಐಟಿಸಿ ಲಿಮಿಟೆಡ್ ಕಂಪನಿಯು ಡಿಸೆಂಬರ್‌ 31ಕ್ಕೆ ಕೊನೆಗೊಂಡ ತ್ರೈಮಾಸಿಕದ ನಿವ್ವಳ ಲಾಭದಲ್ಲಿ ಶೇಕಡ 15ರಷ್ಟು ಏರಿಕೆ ದಾಖಲಿಸಿದೆ. ಕಂಪನಿಯ ಎಲ್ಲ ಉತ್ಪನ್ನಗಳು, ಸೇವೆಗಳಿಗೆ ಬೇಡಿಕೆ ಉತ್ತಮವಾಗಿದ್ದ ಕಾರಣ, ₹ 4,118 ಕೋಟಿ ನಿವ್ವಳ ಲಾಭ ಬಂದಿದೆ.

ಹಿಂದಿನ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು ₹ 3,587 ಕೋಟಿ ನಿವ್ವಳ ಲಾಭ ಕಂಡಿತ್ತು. ಹಿಂದಿನ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು ₹ 14,670 ಕೋಟಿ ಇತ್ತು. ಇದು ಈ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ₹ 18,787 ಕೋಟಿಗೆ ಏರಿಕೆಯಾಗಿದೆ ಎಂದು ಷೇರುಪೇಟೆಗೆ ಕಂಪನಿ ಮಾಹಿತಿ ನೀಡಿದೆ.

ಮಾರ್ಚ್‌ 31ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷಕ್ಕೆ ಅನ್ವಯ ಆಗುವಂತೆ ಕಂಪನಿಯ ಆಡಳಿತ ಮಂಡಳಿಯು, ಷೇರುದಾರರಿಗೆ ಪ್ರತಿ ಷೇರಿಗೆ ₹ 5.25ರಷ್ಟು ಮಧ್ಯಂತರ ಲಾಭಾಂಶ ನೀಡಲು ಒಪ್ಪಿಗೆ ಸೂಚಿಸಿದೆ.

ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು ಸಿಗರೇಟು ವಹಿವಾಟಿನಿಂದ ಒಟ್ಟು ₹ 6,958 ಕೋಟಿ ಆದಾಯ ಗಳಿಸಿದೆ. ಹಿಂದಿನ ವರ್ಷದಲ್ಲಿ ಇದು ₹ 6.091 ಕೋಟಿ ಆಗಿತ್ತು. ಕಂಪನಿಯು ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ ಉತ್ಪನ್ನಗಳ ಮಾರಾಟದಿಂದ ₹ 4,099 ಕೋಟಿ ಆದಾಯ ಗಳಿಸಿದೆ.

ಕಂಪನಿಯ ಹೋಟೆಲ್‌ ವಹಿವಾಟುಗಳಲ್ಲಿನ ಆದಾಯ ಕೂಡ ₹ 495 ಕೋಟಿಗೆ ಹೆಚ್ಚಳವಾಗಿದೆ. ಹಿಂದಿನ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಇದು ₹ 248 ಕೋಟಿ ಆಗಿತ್ತು. ಹೋಟೆಲ್ ಬಳಕೆ ಪ್ರಮಾಣವು ಕೋವಿಡ್‌ ಪೂರ್ವದ ಸ್ಥಿತಿ ತಲುಪಿದೆ ಎಂದು ಕಂಪನಿ ಹೇಳಿದೆ.ಕಂಪನಿಯ ಕೃಷಿ ಉದ್ದಿಮೆಯಿಂದ ಬರುವ ಆದಾಯವು ₹ 5,157 ಕೋಟಿಗೆ ಹೆಚ್ಚಳ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT