ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹4,999ಕ್ಕೆ ಐಟೆಲ್‌ ಎ46 ಸ್ಮಾರ್ಟ್‌ಫೋನ್

Last Updated 14 ಅಕ್ಟೋಬರ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು:ಐಟೆಲ್‌ ಮೊಬೈಲ್‌ ತಯಾರಿಕಾ ಕಂಪನಿಯು ಭಾರತಕ್ಕೆ ಪ್ರವೇಶಿಸಿದ ಮೂರು ವರ್ಷಗಳಲ್ಲಿಯೇ 5 ಕೋಟಿಗೂ ಅಧಿಕ ಗ್ರಾಹಕರನ್ನು ಸಂಪಾದಿಸಿಕೊಂಡಿದೆ.

ಈ ಸಂಭ್ರಮ ಮತ್ತು ದೀಪಾವಳಿ ಹಬ್ಬದ ಕೊಡುಗೆ ಯಾಗಿಐಟೆಲ್ಇದೀಗ ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದೆ. ಗ್ರಾಹಕರು ಕೇವಲ ₹4,999ಕ್ಕೆ ಹೊಸ ಮತ್ತು 2ಜಿಬಿ+16 ಜಿಬಿಯಿಂದ ‌2ಜಿಬಿ+32ಜಿಬಿಗೆ ಮೇಲ್ದರ್ಜೆಗೇರಿಸಿದಐಟೆಲ್‌ ಎ46 ಸ್ಮಾರ್ಟ್‌ಫೋನ್ ಖರೀದಿಸಬಹುದು.

ಸುಧಾರಿತ ಎಐ ಡ್ಯುಯಲ್ ಕ್ಯಾಮೆರಾ, ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಫೇಸ್ ಅನ್‌ಲಾಕ್, ಡ್ಯುಯಲ್ 4ಜಿ ವೋಲ್ಟ್‌, ಆಂಡ್ರಾಯ್ಡ್‌ 9 ಒಎಸ್ ಮತ್ತು 2ಜಿಬಿ ರ‍್ಯಾಮ್ ಮತ್ತು 32ಜಿಬಿ ಇಂಟರ್ನಲ್ ಸ್ಟೊರೇಜ್‌ ಸೌಲಭ್ಯಗಳನ್ನು ಹೊಂದಿದೆ. 128 ಜಿಬಿವರೆಗೆ ವಿಸ್ತರಣೆಗೂ ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT