ಬುಧವಾರ, ಸೆಪ್ಟೆಂಬರ್ 18, 2019
26 °C

ಐಟಿಆರ್‌ ಸಲ್ಲಿಕೆಯಲ್ಲಿ ಹೆಚ್ಚಳ

Published:
Updated:

ನವದೆಹಲಿ (ಪಿಟಿಐ): 2019–20ನೇ ಅಂದಾಜು ವರ್ಷಕ್ಕೆ ಆದಾಯ ತೆರಿಗೆ ಲೆಕ್ಕಪತ್ರ (ಐಟಿಆರ್‌) ಮಾಹಿತಿ ಸಲ್ಲಿಕೆಯಲ್ಲಿ ಶೇ 4ರಷ್ಟು ಏರಿಕೆಯಾಗಿದೆ ಎಂದು ತೆರಿಗೆ ಇಲಾಖೆ ಮಾಹಿತಿ ನೀಡಿದೆ.

ಆಗಸ್ಟ್ 31ರವರೆಗೆ ಒಟ್ಟಾರೆ 5.65 ಕೋಟಿ ಐಟಿಆರ್‌ ಸಲ್ಲಿಕೆಯಾಗಿದೆ. 2018–19ರಲ್ಲಿ ಇದು 5.42 ಕೋಟಿ ಇತ್ತು.

2.86 ಕೋಟಿ (ಶೇ 79ರಷ್ಟು) ತೆರಿಗೆದಾರರು ಆಧಾರ್ ಒಟಿಪಿ ಬಳಸಿ ಇ–ವೇರಿಫಿಕೇಷನ್‌ ನಡೆಸಿದ್ದಾರೆ. 

2018–19ನೇ ಅಂದಾಜು ವರ್ಷಕ್ಕೆ ಐಟಿಅರ್ ಫೈಲಿಂಗ್‌ ಅವಧಿಯನ್ನು 2018ರ ಆಗಸ್ಟ್‌ 31ರವರೆಗೆ ವಿಸ್ತರಿಸ
ಲಾಗಿತ್ತು. ಕೇರಳದಲ್ಲಿ ಪ್ರವಾಹ ಉಂಟಾಗಿದ್ದರಿಂದ 2018ರ ಸೆಪ್ಟೆಂಬರ್‌ವರೆಗೆ ಐಟಿಆರ್‌ ಸಲ್ಲಿಸಲು ವಿಶೇಷ ಅವಕಾಶ ನೀಡಲಾಗಿತ್ತು.

Post Comments (+)