ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಲ್‌ ಗೇಟ್ಸ್ ಮತ್ತೆ ವಿಶ್ವದ ಮೊದಲ ಶ್ರೀಮಂತ: 2ನೇ ಸ್ಥಾನಕ್ಕೆ ಜೆಫ್‌ ಬೆಜೂಸ್

Last Updated 25 ಅಕ್ಟೋಬರ್ 2019, 12:20 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಅಮೆಜಾನ್‌ ಕಂಪನಿಯ ನಿವ್ವಳ ಲಾಭಂಶ ಕಡಿಮೆಯಾಗಿರುವ ಹಿನ್ನೆಯಲ್ಲಿಅಮೆಜಾನ್‌ ಸಂಸ್ಥಾಪಕ ಹಾಗೂ ಸಿಇಒ ಜೆಫ್‌ ಬೆಜೂಸ್‌ ಅವರು ವಿಶ್ವದ ಮೊದಲ ಶ್ರೀಮಂತ ಸ್ಥಾನದಿಂದ 2ನೇ ಸ್ಥಾನಕ್ಕೆ ಇಳಿದಿದ್ದು ಮೈಕ್ರೋಸಾಫ್ಟ್‌ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ ಮತ್ತೆ ಮೊದಲ ಸ್ಥಾನ ಪಡೆದಿದ್ದಾರೆ.

ಕಳೆದೊಂದು ವರ್ಷದಿಂದಲೂ ಅಮೆಜಾನ್‌ ಕಂಪನಿ ಕಳಪೆ ಪ್ರದರ್ಶನ ನೀಡುತ್ತ ಬಂದಿದೆ. 2019ರ3ನೇ ತ್ರೈಮಾಸಿಕದಲ್ಲೂ ವರಮಾನಕುಸಿದಿರುವಹಿನ್ನೆಲೆಯಲ್ಲಿ ಗುರುವಾರ ಅಮೆಜಾನ್‌ ಷೇರು ಮೌಲ್ಯ ಶೇ.7ರಷ್ಟು ಕುಸಿತ ಕಂಡಿದ್ದವು. ಇದರಿಂದ ಅವರಆಸ್ತಿ ಮೌಲ್ಯಸುಮಾರು 700 ಕೋಟಿ ಡಾಲರ್‌ನಷ್ಟು ಕುಸಿದಿದೆ ಎಂದು ಫೋರ್ಬ್ಸ್‌ ವರದಿ ಮಾಡಿದೆ.

ಜೆಫ್‌ ಬೆಜೂಸ್‌ ಅವರ ಒಟ್ಟು ಆಸ್ತಿ ಮೌಲ್ಯ 103.9 ಬಿಲಿಯನ್‌ ಡಾಲರ್‌ಗೆ ಕುಸಿದಿದ್ದು, ಪ್ರಸ್ತುತಬಿಲ್‌ ಗೇಟ್ಸ್‌ ಅವರ ಆಸ್ತಿ ಮೌಲ್ಯ 105.7 ಬಿಲಿಯನ್‌ ಡಾಲರ್‌ ಇರುವುದರಿಂದ ಬಿಲ್‌ ಗೇಟ್ಸ್‌ ಮತ್ತೆ ವಿಶ್ವದ ಅಗ್ರ ಶ್ರೀಮಂತನ ಪಟ್ಟವನ್ನು ಅಲಂಕರಿಸಿದ್ದಾರೆ.

ಸತತ 24 ವರ್ಷಗಳ ಕಾಲಬಿಲ್‌ ಗೇಟ್ಸ್‌ ವಿಶ್ವದ ಅತಿ ಶ್ರೀಮಂತ ವ್ಯಕ್ತಿಯಾಗಿಯೇ ಇದ್ದರು. 2018ರಲ್ಲಿ ಈ ಸ್ಥಾನವನ್ನುಜೆಫ್‌ ಬೆಜೂಸ್‌ ಪಡೆದಿದ್ದರು. ಇದೀಗ ಅವರ ಆಸ್ತಿಯಲ್ಲಿ ಇಳಿಕೆಯಾಗಿರುವುದರಿಂದ ಅವರು 2ನೇ ಸ್ಥಾನಕ್ಕೆ ಇಳಿದಿದ್ದಾರೆ ಎಂದಿ ಫೋರ್ಬ್ಸ್‌ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT