ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜ್ಯುವೆಲ್ಸ್‌ ಆಫ್‌ ಇಂಡಿಯಾ’ ಆಭರಣ ಮೇಳ

Last Updated 22 ಜನವರಿ 2021, 19:04 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನಾಭರಣ ಸಂಸ್ಥೆ ‘ಜ್ಯುವೆಲ್ಸ್‌ ಆಫ್ ಇಂಡಿಯಾ’ದ ಅತಿದೊಡ್ಡ ಆಭರಣ ಮೇಳ ನಗರದ ಅಶೋಕ್‌ ಲಲಿತ್‌ನಲ್ಲಿ ಪ್ರಾರಂಭವಾಗಿದ್ದು, ಭಾನುವಾರದವರೆಗೆ (ಜ.24) ನಡೆಯಲಿದೆ.

ಮೇಳಕ್ಕೆ ಪೂರ್ವಭಾವಿಯಾಗಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕಿ ಸೌಮ್ಯಾರೆಡ್ಡಿ, ಮಾಜಿ ಮಿಸ್‌ ಇಂಡಿಯಾ ಡಾ. ಶ್ರುತಿ ಗೌಡ ಅವರು ‘ಜ್ಯುವೆಲ್‌ ಆಫ್‌ ಇಂಡಿಯಾದ ಪುರಾತನ ಆಭರಣಗಳನ್ನು ಧರಿಸಿಕೊಂಡು ರ‍್ಯಾಂಪ್‌ನಲ್ಲಿ ಹೆಜ್ಜೆ ಹಾಕಿದರು.

ಅಶೋಕ್‌ ಲಲಿತ್‌ ಹೋಟೆಲ್‌ನಲ್ಲಿಶುಕ್ರವಾರ ಮೇಳವನ್ನು ಉದ್ಘಾಟಿಸಲಾಯಿತು.

ಸಂಸ್ಥೆಯ ಪ್ರಚಾರ ರಾಯಭಾರಿ ರಾಧಿಕಾ ಕುಮಾರಸ್ವಾಮಿ ಮಾತನಾಡಿ, ‘ಆಭರಣಗಳ ಖರೀದಿಗೆ ಇದು ಅತ್ಯುತ್ತಮ ಅವಕಾಶ. ಮಹಿಳೆಯರ ಮನಸ್ಸು ಮತ್ತು ಹೃದಯ ಗೆದ್ದ ಆಭರಣ ಸಂಸ್ಥೆ ಇದು’ ಎಂದರು.

ದೇಶದನೂರಕ್ಕೂಹೆಚ್ಚುಪ್ರಮುಖಆಭರಣಸಂಸ್ಥೆಗಳಿಂದಒಂದೇವೇದಿಕೆಯಲ್ಲಿಪುರಾತನ,ಪಾರಂಪರಿಕಆಭರಣಗಳಮಾರಾಟ,ಪ್ರದರ್ಶನ ನಡೆಯುತ್ತಿದೆ.

ಆಭರಣಮೇಳದಸಂಚಾಲಕಸಂದೀಪ್ಬೇಕಲ್, ‘ಕೋವಿಡ್‌ ಬಿಕ್ಕಟ್ಟಿನ ನಂತರ, ದೇಶದಲ್ಲಿ ನಡೆಯುತ್ತಿರುವ ಅತಿದೊಡ್ಡ ಆಭರಣ ಮೇಳ ಇದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT