ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿದೇಶಿ ಪ್ರವಾಸ: ಜಿಯೊದಿಂದ ಹೊಸ ರೋಮಿಂಗ್ ಪ್ಲಾನ್

Published : 27 ಆಗಸ್ಟ್ 2024, 16:13 IST
Last Updated : 27 ಆಗಸ್ಟ್ 2024, 16:13 IST
ಫಾಲೋ ಮಾಡಿ
Comments

ಬೆಂಗಳೂರು: ದೂರಸಂಪರ್ಕ ಕ್ಷೇತ್ರದ ರಿಲಯನ್ಸ್‌ ಜಿಯೊ ಹೊಸ ಅಂತರರಾಷ್ಟ್ರೀಯ ರೋಮಿಂಗ್ ಪ್ಯಾಕ್ ಪರಿಚಯಿಸಿದೆ. 

ಅರಬ್‌ ಸಂಯುಕ್ತ ಸಂಸ್ಥಾನ (ಯುಎಇ), ಥಾಯ್ಲೆಂಡ್, ಕೆ‌ನಡಾ, ಸೌದಿ ಅರೇಬಿಯಾ, ಯುರೋಪ್ ಮತ್ತು ಕೆರಿಬಿಯನ್ ದ್ವೀಪಗಳಿಗೆ ಪ್ರಯಾಣ ಬೆಳೆಸುವವರಿಗಾಗಿ ಹೆಚ್ಚಿನ ಡೇಟಾ, ಅಧಿಕ ಮೌಲ್ಯ ಮತ್ತು ಹೆಚ್ಚು ವ್ಯಾಲಿಡಿಟಿಯ ಅಂತರರಾಷ್ಟ್ರೀಯ ಪ್ಯಾಕ್‌ಗಳನ್ನು ಪರಿಚಯಿಸಿದೆ.

ಕೆನಡಾ: ₹1,691 ಮೌಲ್ಯದ ಪ್ಯಾಕ್‌ನಲ್ಲಿ ಬಳಕೆದಾರರಿಗೆ ಗರಿಷ್ಠ 14 ದಿನಗಳ ವ್ಯಾಲಿಡಿಟಿ ಸಿಗಲಿದೆ. 100 ನಿಮಿಷ ಕರೆ, 50 ಎಸ್‌ಎಂಎಸ್  ಮತ್ತು 5 ಜಿ.ಬಿ ಡೇಟಾ ಸೌಲಭ್ಯ ಸಿಗಲಿದೆ. ₹2,881 ಯೋಜನೆಯಲ್ಲಿ 150 ನಿಮಿಷ ಕರೆ ಸೌಲಭ್ಯ, 30 ದಿನಗಳ ಮಾನ್ಯತೆ, 100 ಉಚಿತ ಎಸ್ಎಂಎಸ್ ಮತ್ತು 10ಜಿ.ಬಿ ಡೇಟಾ ಸಿಗುತ್ತದೆ.

ಯುಎಇ: ₹898 ಯೋಜನೆಯಲ್ಲಿ 7 ದಿನದ ವ್ಯಾಲಿಡಿಟಿ ಇದ್ದು, ಬಳಕೆದಾರರು 100 ನಿಮಿಷಗಳ ಒಳಬರುವ (ಇನ್‌ಕಮಿಂಗ್‌) ಕರೆ, 100 ನಿಮಿಷ ಹೊರಹೋಗುವ (ಔಟ್‌ಗೋಯಿಂಗ್‌) ಕರೆ, 100 ಎಸ್‌ಎಂಎಸ್ ಜೊತೆಗೆ 1ಜಿ.ಬಿ ಡೇಟಾ ನೀಡಲಾಗಿದೆ.

₹1,598 ಯೋಜನೆಯು 14 ದಿನಗಳ ವ್ಯಾಲಿಡಿಟಿ, 150 ನಿಮಿಷ ಹೊರಹೋಗುವ, ಒಳಬರುವ ಕರೆ ಸೌಲಭ್ಯ, 100 ಎಸ್‌ಎಂ‌ಎಸ್, 3ಜಿ.ಬಿ ಡೇಟಾ ಸಿಗಲಿದೆ. ₹2,998 ಪ್ಯಾಕ್‌ನಲ್ಲಿ 21 ದಿನಗಳ ವ್ಯಾಲಿಡಿಟಿ, 250 ನಿಮಿಷ ಕರೆ ಸೌಲಭ್ಯ, 7ಜಿ.ಬಿ ಡೇಟಾ, 100 ಎಸ್ಎಂಎಸ್ ಸಿಗಲಿದೆ.

ಕೆರಿಬಿಯನ್ ಪ್ಯಾಕ್: ₹1,671 ಯೋಜನೆಯು 14 ದಿನದ ಮಾನ್ಯತೆ, 150 ನಿಮಿಷ ಹೊರಹೋಗುವ, 50 ನಿಮಿಷ ಒಳಬರುವ ಕರೆ ಸೌಲಭ್ಯ, 50 ಎಸ್‌ಎಂ‌ಎಸ್ ಮತ್ತು 1 ಜಿ.ಬಿ ಡೇಟಾ ಸಿಗುತ್ತದೆ. ₹3,851 ಯೋಜನೆಯು 30 ದಿನದ ಮಾನ್ಯತೆ, 200 ನಿಮಿಷ ಹೊರಹೋಗುವ ಮತ್ತು 50 ನಿಮಿಷ ಒಳಬರುವ ಕರೆ ಸೌಲಭ್ಯ, 4 ಜಿ.ಬಿ ಡೇಟಾ, 100 ಎಸ್‌ಎಂ‌ಎಸ್ ಸೌಲಭ್ಯ ದೊರೆಯಲಿದೆ.

ಥಾಯ್ಲೆಂಡ್: ₹1,551 ಯೋಜನೆಯು 14 ದಿನ ಮಾನ್ಯತೆ, 100 ನಿಮಿಷ ಕರೆಯೊಂದಿಗೆ 50 ಎಸ್‌ಎಂ‌ಎಸ್ ಮತ್ತು 6ಜಿ.ಬಿ ಡೇಟಾ ಇದೆ. ₹2,851 ಯೋಜನೆಯು 30 ದಿನದ ಮಾನ್ಯತೆ, ಈ ಯೋಜನೆಯಲ್ಲಿ 150 ನಿಮಿಷ ಕರೆ, 12 ಜಿ.ಬಿ ಡೇಟಾ, 100 ಎಸ್‌ಎಂ‌ಎಸ್ ಸಿಗುತ್ತದೆ.

ಸೌದಿ ಅರೇಬಿಯಾ: ₹891 ಪ್ಲಾನ್ 7 ದಿನ ವ್ಯಾಲಿಡಿಟಿ, 100 ನಿಮಿಷ ಕರೆ ಸೌಲಭ್ಯ, 20 ಎಸ್‌ಎಂ‌ಎಸ್ ಮತ್ತು 1ಜಿ.ಬಿ ಡೇಟಾ ಒಳಗೊಂಡಿದೆ. ₹1,291ರ ಯೋಜನೆಯಲ್ಲಿ 14 ದಿನದ ವ್ಯಾಲಿಡಿಟಿ, 100 ನಿಮಿಷ ಕರೆ, 50 ಎಸ್‌ಎಂಎಸ್‌, 2 ಜಿ.ಬಿ ಡೇಟಾ ಲಭ್ಯವಿದೆ. ₹2,891 ಯೋಜನೆಯು 30 ದಿನ ಮಾನ್ಯತೆ, 150 ನಿಮಿಷ ಕರೆ, 5ಜಿ.ಬಿ ಡೇಟಾ, 100 ಎಸ್ಎಂ‌ಎಸ್ ಸೌಲಭ್ಯ ಹೊಂದಿದೆ.

ಯುರೋಪ್ ಪ್ಯಾಕ್: ₹2,899ರ ಯೋಜನೆಯ ಪ್ಯಾಕ್‌ 30 ದಿನ ವ್ಯಾಲಿಡಿಟಿ, 100 ನಿಮಿಷ ಹೊರಹೋಗುವ ಮತ್ತು ಒಳ ಬರುವ ಕರೆ ಸೌಲಭ್ಯ, 100 ಎಸ್‌ಎಂ‌ಎಸ್ ಮತ್ತು 5 ಜಿ.ಬಿ ಡೇಟಾ ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT