ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಯೊ–ಬಿಪಿ ಚಾರ್ಜಿಂಗ್ ಕೇಂದ್ರ ಆರಂಭ

Last Updated 26 ಜನವರಿ 2022, 16:46 IST
ಅಕ್ಷರ ಗಾತ್ರ

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಬಿ.ಪಿ. ಕಂಪನಿಗಳು ಒಟ್ಟಾಗಿ, ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್‌ ಸೌಲಭ್ಯವನ್ನು ದೆಹಲಿಯಲ್ಲಿ ಆರಂಭಿಸಿವೆ. ಇದು ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್‌ಗೆ ದೇಶದಲ್ಲಿ ಆರಂಭವಾಗಿರುವ ಅತಿದೊಡ್ಡ ಕೇಂದ್ರ.

‘ಜಿಯೊ–ಬಿಪಿ ಕಂಪನಿಯು ದೇಶದ ಅತಿದೊಡ್ಡ ಚಾರ್ಜಿಂಗ್ ಕೇಂದ್ರಗಳಲ್ಲಿ ಒಂದನ್ನು ದೆಹಲಿಯ ದ್ವಾರಕಾದಲ್ಲಿ ಆರಂಭಿಸಿದೆ’ ಎಂದು ಕಂಪನಿ ಹೇಳಿದೆ. ಜಿಯೊ–ಬಿಪಿ ದೇಶದಲ್ಲಿ ಇ.ವಿ. ಚಾರ್ಜಿಂಗ್ ಕೇಂದ್ರಗಳ ಜಾಲವನ್ನು ನಿರ್ಮಿಸುವ ಆಲೋಚನೆ ಹೊಂದಿದೆ. ಅಲ್ಲದೆ, ಬ್ಯಾಟರಿ ಬದಲಿಸಿಕೊಳ್ಳುವ ಕೇಂದ್ರ ನಿರ್ಮಿಸುವ ಉದ್ದೇಶವೂ ಈ ಕಂಪನಿಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT