ನವದೆಹಲಿ: ಬ್ರಿಟನ್ ಮೂಲದ ತೈಲ ಮತ್ತು ನೈಸರ್ಗಿಕ ಅನಿಲ ಕಂಪನಿ ಬಿಪಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಜೊತೆಗೂಡಿ ‘ಜಿಯೊ–ಬಿಪಿ’ ಬ್ರ್ಯಾಂಡ್ ಅಡಿಯಲ್ಲಿ ಪೆಟ್ರೋಲ್ ಬಂಕ್‌ಗಳನ್ನು ಆರಂಭಿಸಲಿದೆ. ಮೊದಲ ಪೆಟ್ರೋಲ್ ಬಂಕ್ ಮುಂಬೈ ಸಮೀಪ ಶುರುವಾಗಲಿದೆ.
ರಿಲಯನ್ಸ್ ಮಾಲೀಕತ್ವದ 1,400 ಪೆಟ್ರೋಲ್ ಬಂಕ್‌ಗಳು ಹಾಗೂ 31 ವಿಮಾನ ಇಂಧನ ಕೇಂದ್ರಗಳ ಶೇಕಡ 49ರಷ್ಟು ಷೇರುಗಳನ್ನು ಬಿಪಿ ಕಂಪನಿಯು 2019ರಲ್ಲಿ ಖರೀದಿಸಿದೆ. ಅದಾದ ನಂತರ ರಿಲಯನ್ಸ್‌ನ ಪೆಟ್ರೋಲ್ ಬಂಕ್‌ಗಳನ್ನು ‘ರಿಲಯನ್ಸ್ ಬಿಪಿ ಮೊಬಿಲಿಟಿ ಲಿಮಿಟೆಡ್’ಗೆ ವರ್ಗಾವಣೆ ಮಾಡಲಾಗಿದೆ. ರಿಲಯನ್ಸ್ ಮತ್ತು ಬಿಪಿ ಕಂಪನಿಗಳ ಜಂಟಿ ಹೂಡಿಕೆ ಇರುವ ಇದು, ಜಿಯೊ–ಬಿಪಿ ಪೆಟ್ರೋಲ್ ಬಂಕ್‌ಗಳನ್ನು ನಿರ್ವಹಿಸಲಿದೆ.
ಪೆಟ್ರೋಲ್ ಬಂಕ್‌ಗಳ ಸಂಖ್ಯೆಯನ್ನು 2025ರ ವೇಳೆಗೆ ಒಟ್ಟು 5,500ಕ್ಕೆ ಹೆಚ್ಚಿಸುವ ಗುರಿ ಇದೆ ಎಂದು ಬಿಪಿ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಬರ್ನಾರ್ಡ್ ಲೂನಿ ಅವರು ‘ಇಂಡಿಯಾ ಎನರ್ಜಿ ಫೋರಂ’ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.