ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 92,202 ಕೋಟಿ ಬಂಡವಾಳ ಆಕರ್ಷಿಸಿದ ಜಿಯೊ ಪ್ಲಾಟ್‌ಫಾರ್ಮ್ಸ್‌

ಶೇ 19.90ರಷ್ಟು ಷೇರುಗಳನ್ನು ಮಾರಿದ ಆರ್‌ಐಎಲ್‌
Last Updated 6 ಜೂನ್ 2020, 11:36 IST
ಅಕ್ಷರ ಗಾತ್ರ

ಮುಂಬೈ:ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (ಆರ್‌ಐಎಲ್‌) ಅಂಗಸಂಸ್ಥೆಯಾಗಿರುವ ಜಿಯೋ ಪ್ಲಾಟ್‌ಫಾರ್ಮ್ಸ್ ಆರು ವಾರಗಳಿಗಿಂತಲೂ ಕಡಿಮೆ ಅವಧಿಯಲ್ಲಿವಿವಿಧ ಹೂಡಿಕೆದಾರರಿಂದ ಒಟ್ಟಾರೆ ₹ 92,202.15 ಕೋಟಿ ಬಂಡವಾಳ ಆಕರ್ಷಿಸಿದೆ.

ಕೋವಿಡ್‌–19 ಬಿಕ್ಕಟ್ಟಿನಲ್ಲಿಯೂ ಈ ಪ್ರಮಾಣದ ಹೂಡಿಕೆ ಆಗುತ್ತಿರುವುದಕ್ಕೆ ಕಂಪನಿಯ‌ ಬಗೆಗೆ ಹೂಡಿಕೆದಾರರು ಹೊಂದಿರುವ ವಿಶ್ವಾಸವೇ ಕಾರಣ ಎಂದು ಹೇಳಿದೆ.

ಜಿಯೊ ಪ್ಲಾಟ್‌ಫಾರ್ಮ್ಸ್‌ನಲ್ಲಿನ ಷೇರುಗಳನ್ನು ಮಾರಾಟ ಮಾಡುವ ಮೂಲಕ ಶುಕ್ರವಾರ ಒಂದೇ ದಿನ ಅಬುಧಾಬಿಯ ಮುಬಾದಲಾ ಕಂಪನಿ ಮತ್ತು ಸಿಲ್ವರ್‌ ಲೇಕ್‌ನಿಂದ ಒಟ್ಟಾರೆಯಾಗಿ ₹ 13,460 ಕೋಟಿ ಹೂಡಿಕೆಯನ್ನು ಪಡೆದುಕೊಳ್ಳಲಾಗಿದೆ. ಸಿಲ್ವರ್‌ ಲೇಕ್‌ ಮೇ 3ರಂದು ಶೇ 1.15ರಷ್ಟು ಷೇರು ಖರೀದಿಸಿತ್ತು. ಜೂನ್‌ 5ರಂದು ಮತ್ತೆ ಹೆಚ್ಚುವರಿಯಾಗಿ ಶೇ 0.93ರಷ್ಟು ಷೇರುಗಳನ್ನು ಖರೀದಿಸಿದೆ ಎಂದು ಆರ್‌ಐಎಲ್‌‌ ಮಾಹಿತಿ ನೀಡಿದೆ.

ಈ ಹೂಡಿಕೆಗಳಿಂದ ಕಂಪನಿಯು ತನ್ನ ಉದ್ದೇಶಿತ ಶೇ 19.90ರಷ್ಟು ಷೇರುಗಳನ್ನು ಮಾರಾಟ ಮಾಡಿದಂತಾಗಿದ್ದು, ಇದರಿಂದ ಷೇರುಪೇಟೆಯಲ್ಲಿ ಸಾರ್ವಜನಿಕರಿಗೆ ಷೇರು ಮಾರಾಟ (ಐಪಿಒ) ಮಾಡುವ ಪ್ರಕ್ರಿಯೆಗೆ ಅನುಕೂಲ ಆಗಲಿದೆ.

‘ಭಾರತದಡಿಜಿಟಲ್ ಇಕೊಸಿಸ್ಟಂನ ಬೆಳವಣಿಗೆಹಾಗೂರೂಪಾಂತರವನ್ನುಮುಂದುವರಿಸುವಲ್ಲಿ ಸಿಲ್ವರ್ಲೇಕ್ಹಾಗೂಅದರಸಹ ಹೂಡಿಕೆದಾರರುನಮ್ಮಮೌಲ್ಯಯುತಪಾಲುದಾರರಾಗಿದ್ದಾರೆ.ನಾವುಭಾರತೀಯಡಿಜಿಟಲ್ಸಮಾಜದರೂಪಾಂತರಕ್ಕೆಚಾಲನೆನೀಡುತ್ತಿರುವಾಗಅವರು ತೋರಿಸಿರುವ ವಿಶ್ವಾಸಮತ್ತುಬೆಂಬಲ ಸಂತೋಷ ತಂದಿದೆ. ಜಾಗತಿಕತಂತ್ರಜ್ಞಾನಹೂಡಿಕೆಯಲ್ಲಿಅವರನಾಯಕತ್ವದಲಾಭಮತ್ತು ಮೌಲ್ಯಯುತಸಂಬಂಧಗಳಜಾಲದಪ್ರಯೋಜನವನ್ನುಪಡೆದುಕೊಳ್ಳಲುನಮಗೆಅನುಕೂಲವಾಗಲಿದೆ’ ಎಂದು ಆರ್‌ಐಎಲ್‌ನ ಅಧ್ಯಕ್ಷ ಮುಕೇಶ್‌ ಅಂಬಾನಿ ಪ್ರತಿಕ್ರಿಯಿಸಿದ್ದಾರೆ.

'ಉನ್ನತ ಗುಣಮಟ್ಟ ಹಾಗೂ ಕಡಿಮೆ ವೆಚ್ಚದ ಡಿಜಿಟಲ್ ಸೇವೆಗಳನ್ನು ಸಾಮಾನ್ಯ ಗ್ರಾಹಕರಿಗೆ ಹಾಗೂ ಸಣ್ಣ ಉದ್ಯಮಗಳಿಗೆ ತಲುಪಿಸುವ ಧ್ಯೇಯವನ್ನು ಜಿಯೋ ಪ್ಲಾಟ್‌ಫಾರ್ಮ್ಸ್‌ ಹೊಂದಿದೆ. ಹೀಗಾಗಿ ನಮ್ಮ ಬೆಂಬಲವನ್ನು ಮುಂದುವರಿಸುವ ಉದ್ದೇಶದಿಂದ ನಮ್ಮ ಸಹ-ಹೂಡಿಕೆದಾರರನ್ನು ಈ ಅವಕಾಶದಲ್ಲಿ ಪಾಲ್ಗೊಳ್ಳುವಂತೆ ಮಾಡಲು ನಾವು ಉತ್ಸುಕರಾಗಿದ್ದೇವೆ. ಜಿಯೋ ಮೇಲಿನ ಹೂಡಿಕೆಯ ರಭಸವು ಅದರ ಸದೃಢ ವ್ಯವಹಾರ ಮಾದರಿಯನ್ನು ಪ್ರಕಟಪಡಿಸುತ್ತದೆ’ ಎಂದುಸಿಲ್ವರ್ ಲೇಕ್ ಜಂಟಿನ ಸಿಇಒ ಈಗಾನ್ ಡರ್ಬನ್ ಹೇಳಿದ್ದಾರೆ.

ಕಂಪನಿಗಳ ಹೂಡಿಕೆ ಮೊತ್ತ (ಕೋಟಿಗಳಲ್ಲಿ)

ಫೇಸ್‌ಬುಕ್‌: ₹ 43,574.62

ವಿಸ್ಟಾ‌: ₹11,367

ಕೆಕೆಆರ್: ₹11,367

ಸಿಲ್ವರ್‌ ಲೇಕ್‌: ₹10,202.55

ಮುಬಾದಲಾ: ₹9,093.60

ಜನರಲ್‌ ಅಟ್ಲಾಂಟಿಕ್‌: ₹6,598.38

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT