ಸೋಮವಾರ, ಡಿಸೆಂಬರ್ 5, 2022
21 °C

ರಿಲಯನ್ಸ್ ಜಿಯೊ ಭಾರತದ ಪ್ರಬಲ ಟೆಲಿಕಾಂ ಬ್ರ್ಯಾಂಡ್

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಉದ್ಯಮಿ ಮುಕೇಶ್ ಅಂಬಾನಿ ಅವರ ರಿಲಯನ್ಸ್ ಜಿಯೊ ಭಾರತದ ಪ್ರಬಲ ಟೆಲಿಕಾಂ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ ಎಂದು ಬ್ರ್ಯಾಂಡ್ ಇಂಟೆಲಿಜೆನ್ಸ್ ಹಾಗೂ ಇನ್‌ಸೈಟ್ ಕಂಪನಿ ಟ್ರಸ್ಟ್ ರಿಸರ್ಚ್ ಅಡ್ವೈಸರಿ (ಟಿಆರ್‌ಎ) ತಿಳಿಸಿದೆ.

ಈ ಮೂಲಕ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಲಿಮಿಟೆಡ್ ಸಂಸ್ಥೆಗಳನ್ನು ರಿಲಯನ್ಸ್ ಜಿಯೊ ಹಿಂದಿಕ್ಕಿದೆ.

'ಭಾರತದ ಅತ್ಯಂತ ಅಪೇಕ್ಷಿತ ಬ್ರ್ಯಾಂಡ್‌ 2022'ರಲ್ಲಿ (India's Most Desired Brands 2022) ದೇಶದಲ್ಲಿ ಟೆಲಿಕಾಂ ಬ್ರ್ಯಾಂಡ್‌ಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಟೆಲಿಕಾಂ ವಿಭಾಗದಲ್ಲಿ ರಿಲಯನ್ಸ್ ಜಿಯೊ ಅಗ್ರಸ್ಥಾನದಲ್ಲಿದ್ದು, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಲಿಮಿಟೆಡ್ ಮತ್ತು ಬಿಎಸ್‌ಎನ್‌ಎಲ್ ನಂತರದ ಸ್ಥಾನದಲ್ಲಿವೆ.

ಬಟ್ಟೆಬರೆ ವಿಭಾಗದಲ್ಲಿ ಅಡಿಡಾಸ್ ಅಗ್ರ ಬ್ರ್ಯಾಂಡ್ ಆಗಿ ಹೊರಹೊಮ್ಮಿದ್ದು, ನಿಕ್, ರೇಮಂಡ್, ಅಲೆನ್ ಸೋಲಿ ಮತ್ತು ಪೀಟರ್ ಇಂಗ್ಲೆಂಡ್ ನಂತರದ ಸ್ಥಾನದಲ್ಲಿವೆ.

ಇದನ್ನೂ ಓದಿ: 

ಆಟೋಮೊಬೈಲ್ ಪಟ್ಟಿಯಲ್ಲಿ ಬಿಎಂಡಬ್ಲ್ಯು ಅಗ್ರಸ್ಥಾನದಲ್ಲಿದ್ದು, ಟೊಯೊಟಾ, ಹ್ಯುಂಡೈ, ಹೋಂಡಾ ನಂತರದ ಸ್ಥಾನದಲ್ಲಿವೆ.

ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳಲ್ಲಿ ಎಲ್‌ಐಸಿ ಮೊದಲ ಸ್ಥಾನದಲ್ಲಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಐಸಿಐಸಿಐ ಬ್ಯಾಂಕ್ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು