ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಎಲ್‌ಎಲ್‌: ದತ್ತಾಂಶ ನಿರ್ವಹಣಾ ಕೇಂದ್ರ

Last Updated 16 ನವೆಂಬರ್ 2018, 17:47 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ತಿ ಸಲಹಾ ಸಂಸ್ಥೆ ಜೆಎಲ್ಎಲ್‌, ಬೆಂಗಳೂರಿನಲ್ಲಿ ತಂತ್ರಜ್ಞಾನ ಮತ್ತು ದತ್ತಾಂಶ ನಿರ್ವಹಣಾ ಕೇಂದ್ರಕ್ಕೆ ಚಾಲನೆ ನೀಡಿದೆ.

ವಿಶ್ವದಾದ್ಯಂತ ಇರುವರಿಯಲ್‌ ಎಸ್ಟೇಟ್‌ ಗ್ರಾಹಕರಿಗೆ ಡಿಜಿಟಲ್‌ ಸೇವೆ ಒದಗಿಸುವ ಉದ್ದೇಶದಿಂದ ಈ ಕೇಂದ್ರ ಸ್ಥಾಪಿಸಲಾಗಿದೆ. ಪ್ರೆಸ್ಟೀಜ್‌ ಟ್ರೇಡ್‌ ಟವರ್ ಕಟ್ಟಡದಲ್ಲಿ 20 ಸಾವಿರ ಚದರ ಅಡಿ ಪ್ರದೇಶದಲ್ಲಿ ಈ ಕೇಂದ್ರ ನಿರ್ಮಾಣಗೊಂಡಿದೆ ಎಂದು ಜೆಎಲ್‌ಎಲ್‌ ಏಷ್ಯಾ ಪೆಸಿಫಿಕ್‌ ಸಿಇಒ ಆಂಟನಿ ಕೌಸ್‌ ತಿಳಿಸಿದರು.

‘ಜಾಗತಿಕ ಮಟ್ಟದಲ್ಲಿ ಆಗು ತ್ತಿರುವ ಬದಲಾವಣೆಗಳಿಗೆ ಅನುಗುಣ ವಾಗಿರಿಯಲ್‌ ಎಸ್ಟೇಟ್‌ ಉದ್ಯಮ ಬೆಳೆಯುತ್ತಿದೆ. ತಂತ್ರಜ್ಞಾನ ಬಳಕೆಯೂ ಹೆಚ್ಚಾಗುತ್ತಿದೆ. ತಂತ್ರಜ್ಞಾನ ಮತ್ತು ದತ್ತಾಂಶವು ಈ ಉದ್ಯಮದಲ್ಲಿ ಕ್ರಾಂತಿ ಕಾರಕ ಬದಲಾವಣೆಗೆ ಕಾರಣವಾಗಲಿದೆ. ಈ ಡಿಜಿಟಲ್ ಸ್ಥಿತ್ಯಂತರ ಪ್ರಕ್ರಿಯೆಯಲ್ಲಿ ಮುಂಚೂಣಿಯಲ್ಲಿರಲು ಜೆಎಲ್‌ಎಲ್‌ ಬಯಸುತ್ತದೆ’ ಎಂದು ಹೇಳಿದರು.

ದತ್ತಾಂಶ ಮತ್ತು ತಂತ್ರಜ್ಞಾನ ವಿನ್ಯಾಸದ ಬಗ್ಗೆ ಪ್ರಯೋಗಗಳು, ಕೃತಕ ಬುದ್ಧಿಮತ್ತೆ, ಆಗ್ಮೆಂಟೆಡ್‌ ರಿಯಾಲಿಟಿ, ವರ್ಚುವಲ್ ರಿಯಾಲಿಟಿ ಮತ್ತು ಇನ್ನಿತರ ಹೊಸ ತಂತ್ರಜ್ಞಾನಗಳು ಜೆಎಲ್‌ಎಲ್‌ ಗ್ರಾಹಕರಿಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT