ಪೇಂಟ್ಸ್‌ ಉದ್ಯಮಕ್ಕೆ ಜೆಎಸ್‌ಡಬ್ಲ್ಯು

ಬುಧವಾರ, ಜೂನ್ 26, 2019
29 °C

ಪೇಂಟ್ಸ್‌ ಉದ್ಯಮಕ್ಕೆ ಜೆಎಸ್‌ಡಬ್ಲ್ಯು

Published:
Updated:
Prajavani

ಬೆಂಗಳೂರು: ದೇಶದ ಪ್ರಮುಖ ಉದ್ಯಮಗಳಲ್ಲಿ ಒಂದಾಗಿರುವ ಜೆಎಸ್‌ಡಬ್ಲ್ಯು ಸಮೂಹವು ಕರ್ನಾಟಕದ ಮಾರುಕಟ್ಟೆಯ ಮೂಲಕ ಪೇಂಟ್ಸ್‌ ಉದ್ಯಮಕ್ಕೆ ಕಾಲಿಟ್ಟಿದೆ. 

‘ಸದ್ಯಕ್ಕೆ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಪೇಂಟ್ಸ್‌ ಮಾರಾಟ ಆರಂಭವಾಗಿದೆ. ಕ್ರಮೇಣ ಬೇರೆ ನಗರಗಳಿಗೆ ಮತ್ತು ಇತರ ರಾಜ್ಯಗಳಿಗೂ ವಿಸ್ತರಣೆ ಮಾಡಲಾಗುವುದು’ ಎಂದು ಜೆಎಸ್‌ಡಬ್ಲ್ಯು ಪೇಂಟ್ಸ್‌ನ ಸಿಇಒ ಎ.ಎಸ್‌. ಸುಂದರೇಶನ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಒಂದೇ ದರ: ‘ಸದ್ಯಕ್ಕೆ ಇತರ ಕಂಪನಿಗಳ ಬಿಳಿಯ ಬಣ್ಣ ಅಲ್ಲದೆ ಬೇರೆ ಬಣ್ಣಗಳನ್ನು ಆಯ್ಕೆ ಮಾಡಿಕೊಂಡರೆ ಅದಕ್ಕೆ ಹೆಚ್ಚಿನ ದರ ನೀಡಬೇಕು. ಆದರೆ, ಜೆಎಸ್‌ಡಬ್ಲ್ಯು ಪೇಂಟ್ಸ್‌ನ ಯಾವುದೇ ಬಣ್ಣದ ಪೇಂಟ್ಸ್ ಖರೀದಿಸಿದರೂ ಒಂದೇ ದರ ಇರಲಿದೆ.

‘ಒಂದು ಲೀಟರಿಗೆ ₹ 477 ದರ ನಿಗದಿ ಮಾಡಲಾಗಿದೆ. ದರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. ಪೇಂಟ್‌ ಉದ್ಯಮದಲ್ಲಿ ಇದೊಂದು ಕ್ರಾಂತಿಕಾರಕ ಹೆಜ್ಜೆಯಾಗಿದೆ’ ಎಂದು ಹೇಳಿದರು.

‘ಪರಿಸರ ಮತ್ತು ಗ್ರಾಹಕರ ಸ್ನೇಹಿಯಾಗುವ ನಿಟ್ಟಿನಲ್ಲಿ ಹಲವು ಹೊಸತನಗಳನ್ನು ಅಳವಡಿಸಿಕೊಂಡಿದ್ದೇವೆ. ಪೇಂಟ್‌ ರೋಲರ್‌ ಬಳಸಲು ಅನುಕೂಲ ಆಗುವಂತೆ ಡಬ್ಬಿಗಳನ್ನು ಆಯತಾಕಾರದಲ್ಲಿ ವಿನ್ಯಾಸಗೊಳಿಸಲಾಗಿದೆ’ ಎಂದು ಅವರು ವಿವರಿಸಿದರು.

ಗ್ರಾಹಕರಿಗೆ ನೈಜ ಅನುಭವ ನೀಡಲು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ‘ಕಲರ್‌ವಿಸ್ಟಾ ಸೆನ್ಸ್‌' ಎಂಬ ರಿಟೇಲ್‌ ಎಕ್ಸ್‌ಪೀರಿಯನ್ಸ್‌ ಮಳಿಗೆ ತೆರೆಯಲಾಗಿದೆ. ಗ್ರಾಹರಿಗೆ ಉತ್ಪನ್ನಗಳನ್ನು ಆಯ್ಕೆ ಮಾಡಲು ಅಗತ್ಯವಾದ ಸಲಹೆಗಳು ಇಲ್ಲಿ ಸಿಗಲಿವೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !