ಭಾನುವಾರ, ಮೇ 29, 2022
21 °C

ವಿದ್ಯುತ್ ಚಾಲಿತ ವಾಹನ ಖರೀದಿಗೆ ಉತ್ತೇಜನ: ಜೆಎಸ್‌ಡಬ್ಲ್ಯು ಪ್ರೋತ್ಸಾಹಧನ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ವಿದ್ಯುತ್ ಚಾಲಿತ ವಾಹನ ಖರೀದಿಸುವಂತೆ ತನ್ನ ನೌಕರರಿಗೆ ಉತ್ತೇಜಿಸಲು ₹ 3 ಲಕ್ಷದವರೆಗೆ ಪ್ರೋತ್ಸಾಹ ಧನ ನೀಡಲು ಜೆಎಸ್‌ಡಬ್ಲ್ಯು ಸಮೂಹ ಮುಂದಾಗಿದೆ. ಈ ಕ್ರಮವು ಜನವರಿ 1ರಿಂದ ಜಾರಿಗೆ ಬರಲಿದೆ.

ದೇಶದ ಪ್ರಮುಖ ಕಾರ್ಪೊರೇಟ್ ಕಂಪನಿಯೊಂದು ಇಂತಹ ಉತ್ತೇಜನ ಕ್ರಮ ಕೈಗೊಂಡಿರುವುದು ಇದೇ ಮೊದಲು. ನೌಕರರು ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಖರೀದಿಸಬಹುದು ಅಥವಾ ವಿದ್ಯುತ್ ಚಾಲಿತ ಕಾರು ಖರೀದಿಸಬಹುದು. ಅವರಿಗೆ ₹ 3 ಲಕ್ಷದವರೆಗೆ ಪ್ರೋತ್ಸಾಹ ಧನ ಸಿಗಲಿದೆ.

ಇಷ್ಟು ಮಾತ್ರವೇ ಅಲ್ಲದೆ, ವಿದ್ಯುತ್ ಚಾಲಿತ ವಾಹನ ಖರೀದಿಸಿದವರಿಗೆ ಚಾರ್ಜಿಂಗ್ ಕೇಂದ್ರಗಳ ಸೌಲಭ್ಯವೂ ಸಿಗಲಿದೆ. ಅವರಿಗೆ ವಾಹನ ನಿಲುಗಡೆಗೆ ಕಂಪನಿಯ ಕೇಂದ್ರಗಳಲ್ಲಿ ನಿಗದಿತ ಸ್ಥಳವೂ ಸಿಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು