ಬೆಂಗಳೂರು: ನವೀಕರಿಸಬಹುದಾದ ಇಂಧನ ಬಳಕೆಯ ಕಾಲಘಟ್ಟಕ್ಕೆ ಪೂರಕವಾಗಿ ವಿದ್ಯುತ್ ಮೂಲಸೌಕರ್ಯ ಬಲಪಡಿಸುವ ಮಹತ್ವದ ಹೆಜ್ಜೆಯಾಗಿ ಬೆಂಗಳೂರಿನ ಎಂ.ಎಸ್. ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆವರಣದಲ್ಲಿ ‘ಜೆಎಸ್ಡಬ್ಲ್ಯೂ ಸ್ಮಾರ್ಟ್ ಗ್ರಿಡ್ ಮತ್ತು ಆಟೊಮೇಷನ್ ಅತ್ಯುನ್ನತ ಕೇಂದ್ರ’ವನ್ನು ಪ್ರಾರಂಭಿಸಲಾಗಿದೆ.

ಗ್ರಿಡ್ ಸ್ಥಿರತೆಯನ್ನು ಕಾಯ್ದುಕೊಳ್ಳುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜೆಎಸ್ಡಬ್ಲ್ಯೂ ಸಮೂಹ, ಶಾರಿಕಾ ಎಂಟರ್ಪ್ರೈಸಸ್ ಮತ್ತು ಎಂಎಸ್ಆರ್ಐಟಿ ಜಂಟಿಯಾಗಿ ಈ ಕೇಂದ್ರ ಸ್ಥಾಪಿಸಿವೆ.

‘ದೇಶದ ಸಾಂಪ್ರದಾಯಿಕ ಗ್ರಿಡ್ ವ್ಯವಸ್ಥೆಗಳು ನವೀಕರಿಸಬಹುದಾದ ಇಂಧನ ತರುವ ವ್ಯತ್ಯಾಸ ಹಾಗೂ ಅನಿಶ್ಚಿತತೆಗಳನ್ನು ನಿಭಾಯಿಸಲು ವಿನ್ಯಾಸಗೊಂಡಿಲ್ಲ’ ಎಂದು ಪ್ರಕಟಣೆ ತಿಳಿಸಿದೆ. ಈ ಸಮಸ್ಯೆಯನ್ನು ಪರಿಹರಿಸುವ ಸ್ಪಷ್ಟ ಉದ್ದೇಶದೊಂದಿಗೆ ಜೆಎಸ್ಡಬ್ಲ್ಯೂ-ಸಿಒಇ ಅನ್ನು ಸ್ಥಾಪಿಸಲಾಗಿದೆ ಎಂದು ಹೇಳಿದೆ.

ಈ ಜೆಎಸ್ಡಬ್ಲ್ಯೂ-ಸಿಒಇ ವಿಶಿಷ್ಟವಾದ ‘ಲ್ಯಾಬ್-ಆಸ್-ಎ-ಸರ್ವಿಸ್’ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಸುಧಾರಿತ ಪ್ರಯೋಗಾಲಯ ಮೂಲಸೌಕರ್ಯವನ್ನು ಸ್ಥಾಪಿಸಲು ಅಗತ್ಯವಿರುವ ಬಂಡವಾಳ ಹೂಡಿಕೆಯನ್ನು ಜೆಎಸ್ಡಬ್ಲ್ಯೂ ಗ್ರೂಪ್ ಒದಗಿಸಿದೆ. ಎಂಎಸ್ಆರ್ಐಟಿ ಸಂಸ್ಥೆಯು ಜೆಎಸ್ಡಬ್ಲ್ಯೂ-ಸಿಒಇ ಜಾಗ ಕಲ್ಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.