‘ಕರ ಸಮಾಧಾನ’ ಜಾರಿ ಆದೇಶ

7

‘ಕರ ಸಮಾಧಾನ’ ಜಾರಿ ಆದೇಶ

Published:
Updated:

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬಜೆಟ್‌ ಭಾಷಣದಲ್ಲಿ ಭರವಸೆ ನೀಡಿದಂತೆ ಸಣ್ಣ ಕೈಗಾರಿಕಾ ವಲಯಕ್ಕೆ ‘ಕರ ಸಮಾಧಾನ’ ಯೋಜನೆ ಜಾರಿಗೊಳಿಸುವ ಸಂಬಂಧ ಬುಧವಾರ ಆದೇಶ ಹೊರಡಿಸಲಾಗಿದೆ.

2018 ರ ಜೂನ್‌ 30 ರೊಳಗೆ ತೆರಿಗೆ ಬಾಕಿಯನ್ನು ಪೂರ್ಣ ಪಾವತಿ ಮಾಡಿರುವ ಸಣ್ಣ ಕೈಗಾರಿಕೋದ್ಯಮಿಗಳು ಮತ್ತು ಡೀಲರ್‌ಗಳಿಗೆ ಕರ ಸಮಾಧಾನ ಸಿಗಲಿದೆ. ಇವರಿಗೆ ಶೇ 100 ರಷ್ಟು ದಂಡ ಬಾಕಿ ಮತ್ತು ಬಡ್ಡಿ  ಮನ್ನಾ ಮಾಡಲಾಗುವುದು.

ಕೇಂದ್ರ ಮಾರಾಟ ತೆರಿಗೆ ಕಾಯ್ದೆಯಡಿ (ಸಿಎಸ್‌ಟಿ) ಈ ರಿಯಾಯ್ತಿ ನೀಡಲು ಅವಕಾಶವಿದೆ. ಸಣ್ಣ ಉದ್ದಿಮೆದಾರರು ಜೂನ್‌ 30 ಕ್ಕೆ ಮೊದಲೇ ತೆರಿಗೆಯನ್ನು ಅಂದಾಜು ಮಾಡಿ ಪಾವತಿ ಮಾಡಿರಬೇಕು. ಆ ಬಳಿಕ ಮಾಡಿದರೆ ಯೋಜನೆಯ ಪ್ರಯೋಜನ ಸಿಗುವುದಿಲ್ಲ ಎಂದು ಕರ್ನಾಟಕ ವಾಣಿಜ್ಯ ತೆರಿಗೆಗಳ ಆಯುಕ್ತ ಎಂ.ಎಸ್‌.ಶ್ರೀಕರ ಸ್ಪಷ್ಟ ಪಡಿಸಿದ್ದಾರೆ.

ಇದರಿಂದ ಸಾವಿರಾರು ಸಣ್ಣ ಉದ್ದಿಮೆಗಳಿಗೆ ಪ್ರಯೋಜನವಾಗಲಿದೆ ಎಂದೂ ಅವರು ಹೇಳಿದರು.

ಷರತ್ತುಗಳು: * ಯಾವುದೇ ಕೈಗಾರಿಕೋದ್ಯಮಿಗೆ ಸಿಎಸ್‌ಟಿ ಕಾಯ್ದೆಯ 10–ಎ ಸೆಕ್ಷನ್‌ ಅಡಿ ದಂಡ ವಿಧಿಸಿದ್ದರೆ, ಅಂತಹವರಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ.

*ಯಾವುದೇ ಉದ್ದಿಮೆದಾರ ತೆರಿಗೆ ಪಾವತಿ ಬಾಕಿ ಉಳಿಸಿಕೊಳ್ಳದೇ, ದಂಡ ಮತ್ತು ಬಡ್ಡಿಯನ್ನು ಮಾತ್ರ ಬಾಕಿ ಉಳಿಸಿಕೊಂಡಿದ್ದರೆ, ಮನ್ನಾ ಸೌಲಭ್ಯ ಸಿಗಲಿದೆ. ಆದರೆ, ಇದರ ಅಂದಾಜನ್ನು(ಅಸೆಸ್‌ಮೆಂಟ್‌/ ರೀಅಸೆಸ್‌ಮೆಂಟ್‌) 2018 ರ ಜೂನ್‌ 30 ರೊಳಗೆ ಪೂರ್ಣಗೊಳಿಸಿರಬೇಕು.

*ಬಾಕಿ ವಸೂಲಿ ಪ್ರಕ್ರಿಯೆ ಮತ್ತು ಆದೇಶದ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಹತ್ತಿ, ಅಲ್ಲಿ ಪ್ರಕರಣ ಬಾಕಿ ಉಳಿದಿದ್ದರೆ, ಅಂತಹವರಿಗೆ ಅನ್ವಯ ಆಗುವುದಿಲ್ಲ. ಒಂದು ವೇಳೆ ಪ್ರಕರಣವನ್ನು ಹಿಂದಕ್ಕೆ ಪಡೆದರೆ ಯೋಜನೆಯ ಪ್ರಯೋಜನ ಪಡೆಯಬಹುದು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !