ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಕರ್ಣಾಟಕ ಬ್ಯಾಂಕ್‌ನಿಂದ ಪ್ರಗತಿಗೆ ಹೊಸ ಮಂತ್ರ

Last Updated 23 ಜೂನ್ 2020, 16:13 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಪರಿಸ್ಥಿತಿ ಎದುರಿಸಲು ಪ್ರಸಕ್ತ ಹಣಕಾಸು ವರ್ಷದಲ್ಲಿ ‘ರಕ್ಷಣೆ, ಸಂಘಟನೆ ಮತ್ತು ಸದೃಢ ಬೆಳವಣಿಗೆ’ ಸಾಧಿಸುವ ಮಂತ್ರ ಪಾಲಿಸುವುದಾಗಿ ಕರ್ಣಾಟಕ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್‌ ಅವರು ಹೇಳಿದ್ದಾರೆ.

‘ಪ್ರಸಕ್ತ ಹಣಕಾಸು ವರ್ಷದ ಮುನ್ನೋಟವನ್ನು ಗಮನಿಸಿದರೆ, ಸದ್ಯದ ಪರಿಸ್ಥಿತಿಯಲ್ಲಿ ಬೆಳವಣಿಗೆಗೆ ಸೀಮಿತ ಅವಕಾಶಗಳಷ್ಟೇ ಇವೆ’ ಎಂದು ಕಾನ್ಫರೆನ್ಸ್‌ ಕಾಲ್‌ನಲ್ಲಿ ಹೇಳಿದ್ದಾರೆ.

‘ರಿಟೇಲ್‌ ಮತ್ತು ಮಧ್ಯಮ ಶ್ರೇಣಿಯ ಕಾರ್ಪೊರೇಟ್‌ಗಳ ಬಗ್ಗೆ ಬ್ಯಾಂಕ್ ಹೆಚ್ಚಿನ ಆದ್ಯತೆ ನೀಡಲಿದೆ. ಸಾಲ ವಸೂಲಿ ಮತ್ತು ವಸೂಲಾಗದ ಸಾಲದ ನಿರ್ವಹಣೆ, ಥರ್ಡ್‌ಪಾರ್ಟಿ ಉತ್ಪನ್ನಗಳಿಗೆ ಗಮನ ಹರಿಸಲಾಗುವುದು.

‘ಒಟ್ಟಾರೆ ಗ್ರಾಹಕರಲ್ಲಿ ಶೇ 34.67ರಷ್ಟು ಮಂದಿ ಸಾಲ ಮರುಪಾವತಿ ಅವಧಿ ಮುಂದೂಡಿಕೆ ಯೋಜನೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ವಿವಿಧ ವಲಯಗಳ ಮೇಲೆ ಸಾಲ ಮರುಪಾವತಿ ಮುಂದೂಡಿಕೆ ಪ್ರಮಾಣವು ವ್ಯತ್ಯಾಸವಾಗಲಿದೆ’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT