ಮಂಗಳೂರು: 2025–26ನೇ ಆರ್ಥಿಕ ವರ್ಷದಲ್ಲಿ ಕರ್ಣಾಟಕ ಬ್ಯಾಂಕ್ ₹1,310.50 ಕೋಟಿ ನಿವ್ವಳ ಲಾಭ ದಾಖಲಿಸಿದೆ. ಬ್ಯಾಂಕ್ ಆರ್ಥಿಕ ವರ್ಷ ವೊಂದರಲ್ಲಿ ದಾಖಲಿಸಿದ ಈವರೆಗಿನ ಗರಿಷ್ಠ ನಿವ್ವಳ ಲಾಭ ಇದಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಲಾಭದಲ್ಲಿ ಶೇ 3ರಷ್ಟು ಏರಿಕೆಯಾಗಿದೆ.

2025–26ನೇ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ಈವರೆಗಿನ ಗರಿಷ್ಠ ₹1,92,118.67 ಕೋಟಿ ವಹಿವಾಟು ನಡೆಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ (₹1,82,766.21 ಕೋಟಿ)ವಹಿವಾಟಿನಲ್ಲಿ ಶೇ 5.12ರಷ್ಟು ಏರಿಕೆ ದಾಖಲಾಗಿದೆ ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿದೆ.

ಠೇವಣಿ ಶೇ 3.79ರಷ್ಟು ಏರಿಕೆಯಾಗಿ ₹1,08,778.75 ಕೋಟಿಗೆ ಹಾಗೂ ಸಾಲ ನೀಡಿಕೆ ಶೇ 6.90ರಷ್ಟು ಏರಿಕೆಯಾಗಿ ₹83,339.92 ಕೋಟಿಗೆ ತಲುಪಿದೆ. ಸಾಲ ವಸೂಲಾತಿಯಲ್ಲೂ ಗಮನಾರ್ಹ ಏರಿಕೆಯಾಗಿದ್ದು, ಒಟ್ಟಾರೆ ಅನುತ್ಪಾದಕ ಆಸ್ತಿ ಪ್ರಮಾಣ ಹಿಂದಿನ ವರ್ಷದ ಶೇ 3.32ರಿಂದ ಶೇ 2.78ಕ್ಕೆ ಹಾಗೂ ನಿವ್ವಳ ಅನುತ್ಪಾದಕ ಆಸ್ತಿ ಪ್ರಮಾಣವು ಶೇ 0.98ಕ್ಕೆ (ಹಿಂದಿನ ವರ್ಷ ಶೇ 1.31) ಇಳಿಕೆಯಾಗಿದೆ.

ಮಾರ್ಚ್ 31ಕ್ಕೆ ಕೊನೆಗೊಂಡ ಕೊನೆಯ ತ್ರೈಮಾಸಿಕದಲ್ಲಿ ಬ್ಯಾಂಕ್ ₹408.19 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕಕ್ಕೆ (₹252.37 ಕೋಟಿ) ಹೋಲಿಸಿದರೆ ಶೇ 61.74ರಷ್ಟು ಏರಿಕೆ ದಾಖಲಾಗಿದೆ ಎಂದಿದೆ.

ಕರ್ಣಾಟಕ ಬ್ಯಾಂಕ್ನ ಎಂ.ಡಿ ಮತ್ತು ಸಿಇಒ ರಾಘವೇಂದ್ರ ಎಸ್. ಭಟ್ ಅವರು, ‘ಅಭಿವೃದ್ಧಿ ಯೋಜನೆಗಳ ಮೇಲೆ ಗಮನ ಕೇಂದ್ರೀಕರಿಸಿ, ಸ್ಥಿರವಾದ ವ್ಯವಹಾರ ಮಾದರಿ ಮತ್ತು ದಕ್ಷ ಕಾರ್ಯಾಚರಣೆ ಮೂಲಕ ದಾಖಲೆ ಪ್ರಮಾಣದ ವಹಿವಾಟು ಮತ್ತು ನಿವ್ವಳ ಲಾಭ ದಾಖಲಿಸಲು ಸಾಧ್ಯವಾಗಿದೆ’ ಎಂದು ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-51-324576636

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.