ಕರ್ಣಾಟಕ ಬ್ಯಾಂಕ್: ₹140 ಕೋಟಿ ಲಾಭ

7

ಕರ್ಣಾಟಕ ಬ್ಯಾಂಕ್: ₹140 ಕೋಟಿ ಲಾಭ

Published:
Updated:
Prajavani

ಮಂಗಳೂರು: ಕರ್ಣಾಟಕ ಬ್ಯಾಂಕ್ ಪ್ರಸಕ್ತ ಹಣಕಾಸು ವರ್ಷದ 3ನೇ ತ್ರೈಮಾಸಿಕದಲ್ಲಿ ₹140.41 ಕೋಟಿ ನಿವ್ವಳ ಲಾಭವನ್ನು ಘೋಷಿಸಿದೆ.

ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿನ ನಿವ್ವಳ ಲಾಭವು ₹87.38 ಕೋಟಿಗಳಷ್ಟಿತ್ತು. ಇದಕ್ಕೆ ಹೋಲಿಸಿದರೆ, ಈ ಬಾರಿಯ ನಿವ್ವಳ ಲಾಭವು ಶೇ 60.69 ವೃದ್ಧಿ ಕಂಡಿದೆ.

ಡಿಸೆಂಬರ್‌ ಅಂತ್ಯಕ್ಕೆ ಪ್ರಸಕ್ತ ಸಾಲಿನ 9 ತಿಂಗಳ ಅವಧಿಗೆ ಒಟ್ಟು ನಿವ್ವಳ ಲಾಭವು ₹415.51 ಕೋಟಿಗಳಷ್ಟಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು ₹314.61 ಕೋಟಿಗಳಷ್ಟಿತ್ತು. ಒಟ್ಟು ನಿವ್ವಳ ಲಾಭದಲ್ಲಿಯ ವೃದ್ಧಿಯ ದರವು ಶೇ 32.07 ರಷ್ಟಿದೆ.

ಬ್ಯಾಂಕಿನ ಒಟ್ಟು ವ್ಯವಹಾರವು ₹1,17,102 ಕೋಟಿಗೆ ತಲುಪಿದ್ದು, ಇದು ವರ್ಷದಿಂದ ವರ್ಷಕ್ಕೆ ಶೇ 14.67ರಷ್ಟು ಪ್ರಗತಿ ಸಾಧಿಸಿದೆ. ಬ್ಯಾಂಕಿನ ಠೇವಣಿ ₹65,141 ಕೋಟಿಗಳಷ್ಟಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಬ್ಯಾಂಕಿನ ಒಟ್ಟು ಠೇವಣಿ ₹57,771 ಕೋಟಿಯಷ್ಟಿತ್ತು. ಠೇವಣಿಗಳಲ್ಲಿನ ವೃದ್ಧಿಯ ದರವು ಶೇ 12.76 ರಷ್ಟಾಗಿದೆ.

ಬ್ಯಾಂಕಿನ ಮುಂಗಡ ₹51,961 ಕೋಟಿಗೆ ತಲುಪಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿ ಮುಂಗಡ ₹44,354 ಕೋಟಿಗಳಷ್ಟಿತ್ತು. ಮುಂಗಡಗಳಲ್ಲಿ ವೃದ್ಧಿ ದರ ಶೇ 17.15 ದಾಖಲಿಸಿದೆ. ಬ್ಯಾಂಕಿನ ಒಟ್ಟು ವಸೂಲಾಗದ ಸಾಲದ ಪ್ರಮಾಣವು ಶೇ 4.45 ರಷ್ಟಿದ್ದು, ಪ್ರಸಕ್ತ ವರ್ಷದ ಸೆಪ್ಟೆಂಬರ್ 2018ರ ಅಂತ್ಯಕ್ಕೆ ಅದು ಶೇ 4.66 ಆಗಿತ್ತು.

ನಿರೀಕ್ಷಿತ ಸಾಧನೆ: ನಗರದ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ತೃತೀಯ ತ್ರೈಮಾಸಿಕದ ಫಲಿತಾಂಶಗಳನ್ನು ಘೋಷಿಸಿದ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ,  ಮಹಾಬಲೇಶ್ವರ ಎಂ.ಎಸ್., ‘ಈ ತ್ರೈಮಾಸಿಕ ಫಲಿತಾಂಶಗಳು ನಮ್ಮ ನಿರೀಕ್ಷೆಗೆ ಅನುಗುಣವಾಗಿಯೇ ಇವೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !