ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಂಎಸ್‌ಎಂಇ’ ಸಮಗ್ರ ನೀತಿ: ಪ್ರಧಾನಿಗೆ ಮನವಿ

ಪ್ರಧಾನಿ ನರೇಂದ್ರ ಮೋದಿಗೆ ‘ಎಫ್‌ಕೆಸಿಸಿಐ’ ಮನವಿ
Last Updated 3 ಜನವರಿ 2020, 22:28 IST
ಅಕ್ಷರ ಗಾತ್ರ

ಬೆಂಗಳೂರು: ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು (ಎಂಎಸ್ಎಂಇ) ಉತ್ತೇಜಿಸಲು ಸಮಗ್ರ ನೀತಿ ರೂಪಿಸು
ವುದೂ ಸೇರಿದಂತೆ ಹಲವಾರು ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಕರ್ನಾಟಕ ವಾಣಿಜ್ಯೋದ್ಯಮ ಮಹಾ ಸಂಘವು (ಎಫ್‌ಕೆಸಿಸಿಐ), ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿದೆ.

‘ಎಫ್‌ಕೆಸಿಸಿಐ’ ಪ್ರತಿನಿಧಿಗಳು ಶುಕ್ರವಾರ ಇಲ್ಲಿ ಪ್ರಧಾನಿ ಬಳಿಗೆ ನಿಯೋಗದಲ್ಲಿ ತೆರಳಿದ್ದರು. ‘ಎಂಎಸ್‌ಎಂಇ’ಗಳಿಗೆ ಸಂಬಂಧಿಸಿದಂತೆ ವಸೂಲಾಗದ ಸಾಲದ (ಎನ್‌ಪಿಎ) ನಿಯಮವನ್ನು 180 ದಿನಗಳಿಗೆ ಪರಿಷ್ಕರಣೆ, ಮಾರುಕಟ್ಟೆ ಅಭಿವೃದ್ಧಿ ನೆರವು (ಎಂಡಿಎ) ಯೋಜನೆಗೆ ಹೆಚ್ಚಿನ ಹಣಕಾಸು ನೆರವು, ಜಾಬ್‌ ವರ್ಕ್ಸ್‌ಗಳಿಗೆ ಜಿಎಸ್‌ಟಿ ನಿಯಮ ಸರಳೀಕರಣ ಮತ್ತಿತರ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಸಲ್ಲಿಸಲಾಯಿತು ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಸಿ. ಆರ್‌. ಜನಾರ್ಧನ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT