ಬೆಂಗಳೂರು: ರಾಜ್ಯದ ಆರ್ಥಿಕ ಸ್ಥಿತಿ, ಒಟ್ಟು ಆಂತರಿಕ ಉತ್ಪಾದನೆ (ಜಿಎಸ್ಡಿಪಿ) ಹಾಗೂ ತಲಾವಾರು ಆದಾಯದ ವಿಚಾರವಾಗಿ ಬಹಳ ಆಶಾದಾಯಕವಾದ ಚಿತ್ರಣವೊಂದನ್ನು ‘ಕರ್ನಾಟಕ ಆರ್ಥಿಕ ಸಮೀಕ್ಷೆ 2025–26’ ವರದಿಯು ನೀಡಿದೆ.

ಅಂದಾಜಿನ ಪ್ರಕಾರ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯದ ಆರ್ಥಿಕ ಬೆಳವಣಿಗೆ ದರವು ಶೇಕಡ 8.1ರಷ್ಟು ಇರಲಿದೆ ಎಂದು ವರದಿಯು ಹೇಳಿದೆ. ಇದು ದೇಶದ ಆರ್ಥಿಕ ಬೆಳವಣಿಗೆಯ ಅಂದಾಜು ಆಗಿರುವ ಶೇ7.4ಕ್ಕಿಂತ ಹೆಚ್ಚು.

ವರದಿಯನ್ನು ವಿಧಾನ ಮಂಡಲದ ಉಭಯ ಸದನಗಳಲ್ಲಿ ಶುಕ್ರವಾರ ಮಂಡಿಸಲಾಗಿದೆ. ತಲಾವಾರು ಆದಾಯದ ವಿಚಾರದಲ್ಲಿಯೂ ಕರ್ನಾಟಕವು ರಾಷ್ಟ್ರೀಯ ಸರಾಸರಿಗಿಂತ ಮುಂದೆ ಇದೆ. ದೇಶದ ಇತರ ಹಲವು ರಾಜ್ಯಗಳಿಗಿಂತಲೂ ಮುಂದೆ ಇದೆ ಎಂದು ವರದಿ ಉಲ್ಲೇಖಿಸಿದೆ.

ಹಣದುಬ್ಬರದ ಪರಿಣಾಮವನ್ನು ಪರಿಗಣನೆಗೆ ತೆಗೆದುಕೊಳ್ಳದೆ ಇದ್ದರೆ ರಾಜ್ಯದ ತಲಾ ಆದಾಯವು ಹಾಲಿ ಆರ್ಥಿಕ ವರ್ಷದಲ್ಲಿ ₹4.33 ಲಕ್ಷ ಆಗುತ್ತದೆ. ಇದು ರಾಷ್ಟ್ರಮಟ್ಟದಲ್ಲಿ ₹2.19 ಲಕ್ಷ ಆಗಿದೆ. ಹಣದುಬ್ಬರದ ಪರಿಣಾಮವನ್ನು ಪರಿಗಣನೆಗೆ ತೆಗೆದುಕೊಂಡಾಗ ರಾಜ್ಯದ ತಲಾ ಆದಾಯವು ₹2.23 ಲಕ್ಷ ಆಗುತ್ತದೆ.

ಜಿಎಸ್ಡಿಪಿಯಲ್ಲಿ ಸೇವಾ ವಲಯದ ಸಿಂಹಪಾಲು ಮುಂದುವರಿದಿರುವುದನ್ನು ಆರ್ಥಿಕ ಸಮೀಕ್ಷೆಯು ದಾಖಲಿಸಿದೆ. ಈ ವಲಯವು ಜಿಎಸ್ಡಿಪಿಯಲ್ಲಿ ಶೇ 69.8ರಷ್ಟು ಪಾಲು ಹೊಂದಿದೆ. ನಂತರದ ಸ್ಥಾನಗಳಲ್ಲಿ ಕೈಗಾರಿಕಾ ವಲಯ (ಶೇ 19.4) ಹಾಗೂ ಕೃಷಿ ವಲಯ (ಶೇ 10.8ರಷ್ಟು ಪಾಲು) ಇವೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೃಷಿ ವಲಯದ ಬೆಳವಣಿಗೆ ಪ್ರಮಾಣವು, ಹಣದುಬ್ಬರದ ಪರಿಣಾಮವನ್ನು ಗಣನೆಗೆ ತೆಗೆದುಕೊಂಡ ನಂತರದಲ್ಲಿಯೂ ಶೇ 9.1ರಷ್ಟು ಇರಬಹುದು ಎಂದು ವರದಿಯು ಅಂದಾಜು ಮಾಡಿದೆ. ಅಲ್ಲದೆ, ಕೈಗಾರಿಕಾ ವಲಯದ ಬೆಳವಣಿಗೆಯು ಶೇ 6.7ರಷ್ಟು ಹಾಗೂ ಸೇವಾ ವಲಯವು ಶೇ 8.1ರಷ್ಟು ಬೆಳವಣಿಗೆ ಕಾಣಬಹುದು ಎಂದು ಅಂದಾಜು ಮಾಡಲಾಗಿದೆ.

ಜಿಎಸ್ಡಿಪಿಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಪಾಲು ಶೇ 40.4ರಷ್ಟಿದೆ. ಜಿಲ್ಲಾವಾರು ಜಿಎಸ್ಡಿಪಿ ಪಟ್ಟಿಯಲ್ಲಿ ಬೆಂಗಳೂರು ನಗರವು ಮೊದಲ ಸ್ಥಾನದಲ್ಲಿದೆ. ಎರಡನೆಯ ಹಾಗೂ ಮೂರನೆಯ ಸ್ಥಾನಗಳಲ್ಲಿ ಕ್ರಮವಾಗಿ ದಕ್ಷಿಣ ಕನ್ನಡ (ಶೇ 5.3ರಷ್ಟು) ಹಾಗೂ ಬೆಳಗಾವಿ (ಶೇ 3.9ರಷ್ಟು) ಇವೆ. ಮೊದಲ ಹಾಗೂ ಎರಡನೆಯ ಸ್ಥಾನಗಳಲ್ಲಿ ಇರುವ ಜಿಲ್ಲೆಗಳ ನಡುವಿನ ಅಂತರವು ಆರ್ಥಿಕ ಚಟುವಟಿಕೆಗಳು ಬೆಂಗಳೂರು ನಗರ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಕೇಂದ್ರೀಕೃತವಾಗಿರುವುದನ್ನು ಸ್ಪಷ್ಟವಾಗಿ ತೋರಿಸುತ್ತಿವೆ.

ರಫ್ತು ಹೆಚ್ಚಳ

ರಾಜ್ಯದ ಒಟ್ಟು ರಫ್ತುಗಳ ಪ್ರಮಾಣವನ್ನು 2024–25ಕ್ಕೆ ಹೋಲಿಸಿದಾಗ 2025–26ರಲ್ಲಿ ಶೇ 13.78ರಷ್ಟು ಹೆಚ್ಚಾಗಿದೆ. ಕೃಷಿ ಉತ್ಪನ್ನಗಳ ರಫ್ತುಗಳು 2023–24ರಲ್ಲಿ ₹18,765 ಕೋಟಿ ಇದ್ದದ್ದು, 2024–25ರಲ್ಲಿ ₹22,568 ಕೋಟಿಗೆ ಹೆಚ್ಚಳವಾಗಿ ಸುಮಾರು ಶೇ 20ರಷ್ಟು ಏರಿಕೆ ದಾಖಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.