ಬೆಂಗಳೂರು: ರಾಜ್ಯ ಸರ್ಕಾರವು ಪ್ರೀಮಿಯಂ ಗುಣಮಟ್ಟದ ಮದ್ಯದ ಮೇಲಿನ ತೆರಿಗೆ ದರವನ್ನು ಪೇಯದಲ್ಲಿನ ಮದ್ಯದ ಪ್ರಮಾಣಕ್ಕೆ ಅನುಗುಣವಾಗಿ ನಿಗದಿ ಮಾಡಿರುವ ಕ್ರಮವನ್ನು ಇಂಟರ್ನ್ಯಾಷನಲ್ ಸ್ಪಿರಿಟ್ಸ್ ಆ್ಯಂಡ್ ವೈನ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಐಎಸ್ಡಬ್ಲ್ಯೂಎಐ) ಸ್ವಾಗತಿಸಿದ್ದು, ಇದೊಂದು ಪ್ರಗತಿಪರ ಹೆಜ್ಜೆ ಎಂದು ಹೇಳಿದೆ.

ರಾಜ್ಯದ ಈ ಕ್ರಮವು ಜಾರಿಗೆ ಬಂದಿದ್ದು, ಇದರಿಂದಾಗಿ ಪ್ರೀಮಿಯಂ ವರ್ಗದ ಮದ್ಯದ ಎಂಆರ್ಪಿ ದರಗಳು ಕಡಿಮೆ ಆಗಿವೆ.

‘ಸರ್ಕಾರದ ನಿರ್ಧಾರವು ಮದ್ಯ ತಯಾರಿಕಾ ಉದ್ಯಮದ ಬೆಳವಣಿಗೆಗೆ ಪೂರಕ ಮಾತ್ರವಲ್ಲದೆ, ದೀರ್ಘಾವಧಿಯಲ್ಲಿ ರಾಜ್ಯ ಸರ್ಕಾರದ ವರಮಾನ ವೃದ್ಧಿಗೆ ಹಾಗೂ ಮದ್ಯದ ಕ್ಷೇತ್ರದಲ್ಲಿ ಪಾರದರ್ಶಕ ನಿಯಂತ್ರಣ ವ್ಯವಸ್ಥೆ ನಿರ್ಮಿಸಲು ಕೂಡ ಸಹಕಾರಿಯಾಗಿದೆ’ ಎಂದು ಮದ್ಯ ತಯಾರಿಕಾ ಕಂಪನಿಗಳ ಈ ಸಂಘಟನೆ ಹೇಳಿದೆ.

‘ಉತ್ತಮ ಗುಣಮಟ್ಟದ ಪ್ರೀಮಿಯಂ ಉತ್ಪನ್ನಗಳ ಬಳಕೆಯು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಹಾಗೂ ಸರ್ಕಾರದ ವರಮಾನದ ದೃಷ್ಟಿಯಿಂದ ಸರಿಯಾದುದಾಗಿದೆ. ಈಗ ಜಾರಿಗೆ ತರಲಾಗಿರುವ ತೆರಿಗೆ ವ್ಯವಸ್ಥೆಯು ಸೂಕ್ತವಾಗಿದೆ. ಇದರಿಂದಾಗಿ ಪ್ರೀಮಿಯಂ ವರ್ಗದ ಮದ್ಯದ ಎಂಆರ್ಪಿ ದರ ಶೇ 10ರಿಂದ ಶೇ 20ರವರೆಗೆ ಕಡಿಮೆ ಆಗಿದ್ದು, ನೆರೆಯ ರಾಜ್ಯಗಳಲ್ಲಿನ ದರಕ್ಕೆ ಹತ್ತಿರವಾಗಲಿದೆ’ ಎಂದು ಪ್ರಕಟಣೆ ಹೇಳಿದೆ.

‘ತೆರಿಗೆ ಪರಿಷ್ಕರಣೆಯಿಂದಾಗಿ ಪ್ರೀಮಿಯಂ ಮತ್ತು ಮಿಡ್–ಪ್ರೀಮಿಯಂ ವರ್ಗದ ಮದ್ಯ ಗ್ರಾಹಕರಿಗೆ ದರ ಕಡಿತದ ನೇರ ಲಾಭ ಸಿಗಲಿದೆ’ ಎಂದು ಕೂಡ ಸಂಘಟನೆ ತಿಳಿಸಿದೆ.

ಪ್ರಮುಖ ಬ್ರ್ಯಾಂಡ್ನ ಮದ್ಯದ ದರ ಈ ರೀತಿ ಇದೆ:

ಮೆಕ್ಡೊವೆಲ್ಸ್ ನಂ.1 ಬ್ರಾಂಡಿ (180 ಎಂಎಲ್): ₹185 ಇದ್ದಿದ್ದು ₹175ಕ್ಕೆ ಇಳಿಕೆ

ಮೆಕ್ಡೊವೆಲ್ಸ್ ನಂ.1 ವಿಸ್ಕಿ (180 ಎಂಎಲ್): ₹235 ಇದ್ದಿದ್ದು ₹215ಕ್ಕೆ ಇಳಿಕೆ

ಓಕ್ಸ್ಮಿತ್ ಗೋಲ್ಡ್ (180 ಎಂಎಲ್): ₹435 ಇದ್ದಿದ್ದು ₹345ಕ್ಕೆ ಇಳಿಕೆ

ಸಿಗ್ನೇಚರ್ ವಿಸ್ಕಿ (180 ಎಂಎಲ್): ₹444 ಇದ್ದಿದ್ದು ₹350ಕ್ಕೆ ಇಳಿಕೆ

ಟೀಚರ್ಸ್ 50 (180 ಎಂಎಲ್): ₹835 ಇದ್ದಿದ್ದು ₹710ಕ್ಕೆ ಇಳಿಕೆ

ಓಕ್ಸ್ಮಿತ್ ಗೋಲ್ಡ್ (750 ಎಂಎಲ್): ₹1,810 ಇದ್ದಿದ್ದು ₹1,420ಕ್ಕೆ ಇಳಿಕೆ

ಟೀಚರ್ಸ್ 50 (750 ಎಂಎಲ್): ₹3,345 ಇದ್ದಿದ್ದು ₹2,820ಕ್ಕೆ ಇಳಿಕೆ

ಜಾನಿ ವಾಕರ್ ಬ್ಲ್ಯಾಕ್ ಲೇಬಲ್ (750 ಎಂಎಲ್): ₹5,190 ಇದ್ದಿದ್ದು ₹4,005ಕ್ಕೆ ಇಳಿಕೆ

ಜಾನಿ ವಾಕರ್ ಬ್ಲೂ ಲೇಬಲ್ (750 ಎಂಎಲ್): ₹17,390 ಇದ್ದಿದ್ದು ₹15,500ಕ್ಕೆ ಇಳಿಕೆ

(* ಐಎಸ್ಡಬ್ಲ್ಯೂಎಐ ಸಂಘಟನೆ ನೀಡಿರುವ ದರ ಪಟ್ಟಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.