ಕೆಜಿಎಫ್: ಬೆಮಲ್ ಸಂಸ್ಥೆ ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುತ್ತಿದೆ. ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಬೆಮಲ್ ಕೆಜಿಎಫ್ ಕಾಂಪ್ಲೆಕ್ಸ್ ಮುಖ್ಯಸ್ಥ ಜಿ.ಯೋಗಾನಂದ ಹೇಳಿದರು.

ಬೆಮಲ್ ಕಾರ್ಖಾನೆಯಲ್ಲಿ ಸೋಮವಾರ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿ, ರಾಷ್ಟ್ರದ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಯಂತ್ರಗಳನ್ನು ನಿರ್ಮಾಣ ಮಾಡುತ್ತಿದೆ. ದೇಶದ ಅಭಿವೃದ್ಧಿಗೆ ಸದಾ ಕೊಡುಗೆ ನೀಡುತ್ತಿದೆ. ಚಾಲಕರಹಿತ ಮೆಟ್ರೊ, ಹೈ-ಸ್ಪೀಡ್ ರೈಲು, ಇವಿ ಡಂಪ್ ಟ್ರಕ್ ಮತ್ತು ಎಲೆಕ್ಟ್ರಿಕ್ ಅಗೆಯುವ ಯಂತ್ರಗಳು ಬಿಇಎಂಎಲ್ನ ಮುಂದಿನ ಪೀಳಿಗೆಯ ಉತ್ಪನ್ನಗಳಾಗಲಿವೆ. ಬಿಇಎಂಎಲ್ನ ಪ್ರಯಾಣವು ಒಂದು ಮೈಲಿಗಲ್ಲು, ನಿಮ್ಮ ನಿರಂತರ ಬೆಂಬಲದೊಂದಿಗೆ ನಾವು ಭವಿಷ್ಯದಲ್ಲಿ ಹೊಸ ದಾಖಲೆಗಳನ್ನು ರಚಿಸುತ್ತಿದೆ ಎಂದು ತಿಳಿಸಿದರು.

ಎಸ್ಬಿ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಆರ್.ಯೋಗಾನಂದ ಮಾತನಾಡಿ, ಬೆಮಲ್ ಸಂಸ್ಥೆ ರಾಷ್ಟ್ರ ನಿರ್ಮಾಣದಲ್ಲಿ ಮಂಚೂಣಿ ಸ್ಥಾನದಲ್ಲಿರುವುದುಕ್ಕೆ ನಮ್ಮ ಹಿರಿಯರು ನೀಡಿದ ಕೊಡುಗೆ ಕಾರಣ. ಮುಂದೆಯೂ ಕೂಡ ಭವಿಷ್ಯದ ಜವಾಬ್ದಾರಿಯನ್ನು ಯುವ ಪೀಳಿಗೆ ತೆಗೆದುಕೊಳ್ಳಬೇಕೆಂದು ತಿಳಿಸಿದರು.

ಕಾರ್ಯನಿರ್ವಾಹಕ ನಿರ್ದೇಶಕ (ಹಣಕಾಸು) ಅಪರೂಪ್ ಸಿನ್ಹಾ, ಹಿರಿಯ ಅಧಿಕಾರಿಗಳಾದ ನೀನಾಸಿಂಗ್, ತಬಿತಲ್ ಸುಬ್ರಹ್ಮಣಿ, ಕಾರ್ಮಿಕ ಸಂಘದ ಅಧ್ಯಕ್ಷ ಓ.ರಾಮಚಂದ್ರ ರೆಡ್ಡಿ ಮತ್ತು ಗುತ್ತಿಗೆ ಕಾರ್ಮಿಕ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-18-1695130674

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.