ನವದೆಹಲಿ: ಖಾದಿ ಮತ್ತು ಗ್ರಾಮೀಣ ಕೈಗಾರಿಕೆಗಳ ಆಯೋಗವು (ಕೆವಿಐಸಿ) ‘ಖಾದಿ ಇಂಡಿಯಾ’ ಉತ್ಪನ್ನಗಳ ಮಾರಾಟಕ್ಕೆ ಇರುವ ಇ–ವಾಣಿಜ್ಯ ವೇದಿಕೆಗೆ ಶೀಘ್ರವೇ ಹೊಸ ರೂಪ ನೀಡಲಿದೆ ಎಂದು ಅಧ್ಯಕ್ಷ ಮನೋಜ್ ಕುಮಾರ್ ಮಂಗಳವಾರ ತಿಳಿಸಿದ್ದಾರೆ.

ಹೊಸ ರೂಪದಲ್ಲಿ ಬರಲಿರುವ ವೇದಿಕೆಯು ಜಾಗತಿಕ ಮಟ್ಟದ್ದಾಗಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ಪನ್ನಗಳನ್ನು ಹುಡುಕಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಅವುಗಳನ್ನು ಸ್ಪಷ್ಟವಾಗಿ ವರ್ಗೀಕರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಉತ್ಪನ್ನಗಳ ಚಿತ್ರಗಳು ಹೆಚ್ಚಿನ ಗುಣಮಟ್ಟದ್ದಾಗಿರಲಿವೆ, ಖರೀದಿಗೆ ಅಂತಿಮಗೊಳಿಸಿದ ಉತ್ಪನ್ನಗಳಿಗೆ ಹಣ ಪಾವತಿಸುವ ವಿಧಾನವು ಹೆಚ್ಚು ಸುಧಾರಿತವಾಗಿರಲಿದೆ, ಸ್ಮಾರ್ಟ್ಫೋನ್ ಮೂಲಕ ಖರೀದಿ ಮಾಡುವವರಿಗೆ ಅನುಕೂಲ ಮಾಡಿಕೊಡುವ ಬಗೆಯಲ್ಲಿ ಇದರ ವಿನ್ಯಾಸ ಇರಲಿದೆ ಎಂದು ಕೂಡ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.