ಗುರುವಾರ , ಸೆಪ್ಟೆಂಬರ್ 23, 2021
22 °C

ಕುದುರೆಮುಖ ಕಬ್ಬಿಣ ಅದಿರು ಕಂಪನಿ: ವಿಸ್ತರಣೆಗೆ ನೆರವು ಕೋರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಕೈಗೊಳ್ಳಲಿರುವ ಹೊಸ ವಿಸ್ತರಣಾ ಯೋಜನೆಗಳಿಗೆ ನೆರವು ನೀಡಬೇಕು ಎಂದು ಕುದುರೆಮುಖ ಕಬ್ಬಿಣ ಅದಿರು ಕಂಪನಿಯು (ಕೆಐಒಸಿಎಲ್‌) ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.

ಕೇಂದ್ರೋದ್ಯಮ ‘ಕೆಐಒಸಿಎಲ್‌’, ಕಬ್ಬಿಣ ಅದಿರು ಗಣಿಗಾರಿಕೆ, ಕಬ್ಬಿಣ ಉಂಡೆ ತಯಾರಿಕೆ ಮತ್ತು ಮಾರಾಟ ವಹಿವಾಟು ನಡೆಸುತ್ತಿದೆ. ಕರ್ನಾಟಕದಲ್ಲಿ ಹೊಸದಾಗಿ ಕೈಗೊಳ್ಳಲಿರುವ ವಿಸ್ತರಣಾ ಯೋಜನೆಗಳಿಗೆ ಗಮನಾರ್ಹ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದಾಗಿದೆ.

‘ಕೆಐಒಸಿಎಲ್‌’ನ ವ್ಯವಸ್ಥಾಪಕ ನಿರ್ದೇಶಕ ಎಂ. ವಿ. ಸುಬ್ಬರಾವ್‌ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯ್‌ ಭಾಸ್ಕರ್‌ ಅವರನ್ನು ಭೇಟಿಯಾಗಿ ಕಂಪನಿಯ ಸಾಧನೆಗಳ ವಿವರ ನೀಡಿದರು. ಸಂಸ್ಥೆ ಕೈಗೊಳ್ಳಲಿರುವ ವಿಸ್ತರಣಾ ಯೋಜನೆಗಳಿಗೆ ನೆರವು ನೀಡಬೇಕು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು