ಮಂಗಳವಾರ, ಸೆಪ್ಟೆಂಬರ್ 24, 2019
29 °C

ಕೆಐಒಸಿಎಲ್‌: ₹ 111 ಕೋಟಿ ಲಾಭ

Published:
Updated:
Prajavani

ಬೆಂಗಳೂರು: ಉಕ್ಕು ಸಚಿವಾಲಯದ ಅಧೀನದಲ್ಲಿರುವ ಕೇಂದ್ರೋದ್ಯಮವಾಗಿರುವ ಕುದುರೆಮುಖ ಕಬ್ಬಿಣ ಅದಿರು ಕಂಪನಿಯು  (ಕೆಐಒಸಿಎಲ್‌) 2018–19ನೆ ಹಣಕಾಸು ವರ್ಷದಲ್ಲಿ ಉತ್ತಮ ಸಾಧನೆ ದಾಖಲಿಸಿದೆ.

ವ್ಯವಸ್ಥಾಪಕ ನಿರ್ದೇಶಕ ಎಂ. ವಿ. ಸುಬ್ಬರಾವ್‌ ಅವರು ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಿ, ‘ಕಂಪನಿಯ ಒಟ್ಟು ವರಮಾನವು ₹ 2,012.68 ಕೋಟಿಗಳಷ್ಟಾಗಿದೆ. ನಿವ್ವಳ ಲಾಭವು ಶೇ 37ರಷ್ಟು ಹೆಚ್ಚಳಗೊಂಡು ₹ 111.86 ಕೋಟಿಗಳಷ್ಟಾಗಿದೆ. ವಿದೇಶಗಳಲ್ಲಿ ಹೊಸ ಮಾರುಕಟ್ಟೆ ವಿಸ್ತರಿಸಲಾಗಿದೆ. ಸರಕಿನ ಆಮದು ರಫ್ತಿಗೆ ಸಾಗರ ಮಾರ್ಗದ ಸಂಪೂರ್ಣ ಬಳಕೆ ಮಾಡಲಾಗುತ್ತಿದೆ. ಮಿತವ್ಯಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ಕಚ್ಚಾ ಸರಕಿನ ವೆಚ್ಚ ಕಡಿಮೆಮಾಡಿ ಉತ್ಪಾದನೆ ಹೆಚ್ಚಿಸಲಾಗಿದೆ. ಉಕ್ಕಿನ ಉಂಡೆಗಳ ಉತ್ಪಾದನೆಯು  22 ಲಕ್ಷ ಟನ್‌ಗಳಷ್ಟಾಗಿ ಗುರಿ ಮೀರಿದ ಸಾಧನೆ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

ವಾರ್ಷಿಕ ಸಾಮಾನ್ಯ ಸಭೆಯು ₹ 10 ಮುಖಬೆಲೆಯ ಪ್ರತಿ ಷೇರಿಗೆ ₹ 1.33ರಂತೆ ಲಾಭಾಂಶ ಘೋಷಣೆಗೆ ತನ್ನ ಸಮ್ಮತಿ ನೀಡಿದೆ.

 

Post Comments (+)