ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆಐಒಸಿಎಲ್‌’ಗೆ ₹ 112 ಕೋಟಿ ಲಾಭ

Last Updated 21 ಮೇ 2019, 17:21 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಕುದುರೆ ಮುಖ ಕಬ್ಬಿಣ ಅದಿರು ಕಂಪನಿಯು (ಕೆಐಒಸಿಎಲ್‌) 2018–19ನೆ ಹಣಕಾಸು ವರ್ಷದಲ್ಲಿ ₹ 111.86 ಕೋಟಿಗಳ ನಿವ್ವಳ ಲಾಭ ಗಳಿಸಿದೆ.

ಹಣಕಾಸು ವರ್ಷದಲ್ಲಿನ ಒಟ್ಟಾರೆ ವಹಿವಾಟು ಶೇ 15ರಷ್ಟು ಹೆಚ್ಚಳವಾಗಿ ₹ 1,887.71 ಕೋಟಿಗಳಷ್ಟಾಗಿದೆ.

‘ಉಕ್ಕಿನ ಉಂಡೆ ತಯಾರಿಕಾ ಘಟಕದ ಉತ್ಪಾದನೆಯು ನಿರಂತರವಾಗಿ ಉತ್ತಮ ಸಾಧನೆ ತೋರಿಸಿದೆ. 22 ಲಕ್ಷ ಟನ್‌ ಉತ್ಪಾದನೆಯಲ್ಲಿ 15 ಲಕ್ಷ ಟನ್‌ ರಫ್ತು ಮಾಡಲಾಗಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ. ವಿ. ಸುಬ್ಬರಾವ್‌ ಹೇಳಿದ್ದಾರೆ.

ಲಾಭಾಂಶ ಘೋಷಣೆ: ನಿರ್ದೇಶಕ ಮಂಡಳಿಯು ಪ್ರತಿ ಷೇರಿಗೆ ₹ 1.33 ರಂತೆ ಲಾಭಾಂಶ ಘೋಷಿಸಿದ್ದು, ಸರ್ವ ಸದಸ್ಯರ ಸಭೆಯು ಇದಕ್ಕೆ ಒಪ್ಪಿಗೆ ನೀಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT