ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲಯನ್ಸ್‌ ಜಿಯೊದಲ್ಲಿ ₹11,367 ಕೋಟಿ ಹೂಡಿಕೆ ಮಾಡಲಿದೆ ಕೆಕೆಆರ್‌

ಅಕ್ಷರ ಗಾತ್ರ

ಮುಂಬೈ: ಅಮೆರಿಕ ಮೂಲದ ಕೆಕೆಆರ್‌ ಹೂಡಿಕೆದಾರ ಸಂಸ್ಥೆ ರಿಲಯನ್ಸ್‌ ಇಂಡಸ್ಟ್ರೀಸ್‌ನ ಜಿಯೊ ಪ್ಲಾಟ್‌ಫಾರ್ಮ್ಸ್‌ನಲ್ಲಿ ₹11,367 ಕೋಟಿ ಹೂಡಿಕೆ ಮಾಡುವ ಮೂಲಕ ಶೇ 2.32ರಷ್ಟು ಪಾಲುದಾರಿಕೆ ಹೊಂದಲಿದೆ ಎಂದು ರಿಲಯ‌ನ್ಸ್‌ ಹೇಳಿದೆ.

ಕಳೆದ ಒಂದು ತಿಂಗಳಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ಜಿಯೊದಲ್ಲಿ ಐದು ಸಂಸ್ಥೆಗಳಿಂದ ಒಟ್ಟು ₹78,562 ಕೋಟಿ ಹೂಡಿಕೆಯಾದಂತಾಗಿದೆ. ಸಾಲ ಮುಕ್ತಗೊಳ್ಳುವ ಪ್ರಯತ್ನದಲ್ಲಿರುವ ರಿಯಲನ್ಸ್‌ ವಿದೇಶಿ ಸಂಸ್ಥೆಗಳಿಂದ ಹೂಡಿಕೆ ಪಡೆದುಕೊಳ್ಳುತ್ತಿದೆ. ಈ ವಹಿವಾಟು ಜಿಯೊ ಪ್ಲಾಟ್‌ಫಾರ್ಮ್‌ನ ಈಕ್ವಿಟಿ ಮೌಲ್ಯವು ₹4.91 ಲಕ್ಷ ಕೋಟಿಗೆ ಹಾಗೂ ಎಂಟರ್‌ಪ್ರೈಸ್ ಮೌಲ್ಯವನ್ನು ₹5.16 ಲಕ್ಷ ಕೋಟಿಗೆ ಕೊಂಡೊಯ್ಯಲಿದೆ. ಇದು ಏಷ್ಯಾದಲ್ಲಿ ಕೆಕೆಆರ್‌ನ ಅತಿದೊಡ್ಡ ಹೂಡಿಕೆಯಾಗಿದೆ.

ಕೆಕೆಆರ್ ಈ ಹೂಡಿಕೆಯನ್ನು ಏಷ್ಯಾ ಪ್ರೈವೇಟ್ ಈಕ್ವಿಟಿ ಹಾಗೂ ಗ್ರೋತ್ ಟೆಕ್ನಾಲಜಿ ಫಂಡ್‌ಗಳ ಮೂಲಕ ಮಾಡುತ್ತಿದೆ.

ರಿಲಯನ್ಸ್‌ ಇಂಡಸ್ಟ್ರೀಸ್‌ (ಆರ್‌ಐಎಲ್‌) ತನ್ನ ಡಿಜಿಟಲ್‌ ಘಟಕ ಜಿಯೊ ಪ್ಲಾಟ್‌ಫಾರ್ಮ್ಸ್‌ನಲ್ಲಿ ಫೇಸ್‌ಬುಕ್‌, ಸಿಲ್ವರ್‌ ಲೇಕ್‌ ಮತ್ತು ವಿಸ್ತಾ ಈಕ್ವಿಟಿ ಪಾರ್ಟನರ್ಸ್‌, ಜನರಲ್‌ ಅಟ್ಲಾಂಟಿಕ್‌ ಈಗಾಗಲೇ ಪಾಲು ಖರೀದಿ ಒಪ್ಪಂದ ಮಾಡಿಕೊಂಡಿವೆ.

ಇದರೊಂದಿಗೆ ರಿಲಯನ್ಸ್‌ ₹53,125 ಕೋಟಿ ಮೌಲ್ಯದ ಹಕ್ಕಿನ ಷೇರುಗಳ ವಿತರಣೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT