ಶುಕ್ರವಾರ, ಅಕ್ಟೋಬರ್ 30, 2020
24 °C

ರಿಲಯನ್ಸ್‌ ರಿಟೇಲ್‌ನಲ್ಲಿ ₹5,550 ಕೋಟಿ ಹೂಡಿಕೆ ಮಾಡಲಿದೆ ಕೆಕೆಆರ್‌

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Reliance

ನವದೆಹಲಿ: ರಿಲಯನ್ಸ್‌ ರಿಟೇಲ್‌ನಲ್ಲಿ ಜಾಗತಿಕ ಹೂಡಿಕೆ ಸಂಸ್ಥೆ ಕೆಕೆಆರ್‌&ಕಂ. ₹5,550 ಕೋಟಿ ಹೂಡಿಕೆ ಮಾಡಲಿದೆ. ಇದರೊಂದಿಗೆ ರಿಲಯನ್ಸ್‌ ರಿಟೇಲ್‌ನಲ್ಲಿ ಶೇ 1.28ರಷ್ಟು ಪಾಲುದಾರಿಕೆ ಹೊಂದಲಿದೆ.

ರಿಲಯನ್ಸ್‌ ರಿಟೇಲ್‌ನಲ್ಲಿ ಕೆಕೆಆರ್‌ ಎರಡನೇ ಬಾರಿಗೆ ಹೂಡಿಕೆ ಮಾಡುತ್ತಿದೆ. ಈ ವರ್ಷದ ಆರಂಭದಲ್ಲಿ ರಿಲಿಯನ್ಸ್ ಜಿಯೊದಲ್ಲಿ ಕೆಕೆಆರ್‌ ₹11,367 ಕೋಟಿ ಹೂಡಿಕೆ ಮಾಡಿತ್ತು. ಅಮೆರಿಕದ ಈಕ್ವಿಟಿ ಸಂಸ್ಥೆ ಸಿಲ್ವರ್ ಲೇಕ್ ಪಾರ್ಟ್‌ನರ್ಸ್‌ ಇತ್ತೀಚೆಗಷ್ಟೇ ರಿಲಯನ್ಸ್‌ ರಿಟೇಲ್‌ನಲ್ಲಿ ₹7,500 ಕೋಟಿ ಹೂಡಿಕೆ ಮೂಲಕ ಶೇ 1.75ರಷ್ಟು ಪಾಲುದಾರಿಕೆ ಹೊಂದುವುದಾಗಿ ಘೋಷಿಸಿತ್ತು.

ಇದನ್ನೂ ಓದಿ: ರಿಲಯನ್ಸ್‌ ರಿಟೇಲ್‌ನಲ್ಲಿ ₹ 7,500 ಕೋಟಿ ಹೂಡಿಕೆ ಮಾಡಲಿದೆ ಸಿಲ್ವರ್ ಲೇಕ್

ಸದ್ಯ, ಕೆಕೆಆರ್‌ ತನ್ನ ಏಷ್ಯಾದ ಖಾಸಗಿ ಷೇರು ನಿಧಿಯಿಂದ ರಿಲಯನ್ಸ್‌ ರಿಟೇಲ್‌ನಲ್ಲಿ ಹೂಡಿಕೆ ಮಾಡಲಿದೆ

ಉದ್ಯಮಿ ಮುಕೇಶ್ ಅಂಬಾನಿ ಒಡೆತನದಲ್ಲಿರುವ ರಿಲಯನ್ಸ್, ಮುಂದಿನ ಕೆಲವು ತ್ರೈಮಾಸಿಕಗಳಲ್ಲಿ ಹೂಡಿಕೆದಾರರನ್ನು ಆಕರ್ಷಿಸುವ ಸಲುವಾಗಿ ತನ್ನ ರಿಟೇಲ್ ವ್ಯವಹಾರವನ್ನು ವೇಗವಾಗಿ ಅಭಿವೃದ್ಧಿಗೊಳಿಸುತ್ತಿದೆ.

ಇದನ್ನೂ ಓದಿ: ರಿಲಯನ್ಸ್‌ ಜಿಯೊದಲ್ಲಿ ₹11,367 ಕೋಟಿ ಹೂಡಿಕೆ ಮಾಡಲಿದೆ ಕೆಕೆಆರ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು