ಮಂಗಳವಾರ, ಜೂನ್ 28, 2022
26 °C

ಕೆಎಂಎಫ್‌: ಹಾಲು ಸಂಗ್ರಹ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಾಲು ಉತ್ಪಾದನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೆಎಂಎಫ್‌ (ಕರ್ನಾಟಕ ಹಾಲು ಮಹಾಮಂಡಳ) ದಿನವೊಂದಕ್ಕೆ ಸಂಗ್ರಹಿಸುವ ಒಟ್ಟು ಹಾಲಿನ ಪ್ರಮಾಣ 91.07 ಲಕ್ಷ ಕೆ.ಜಿ.ಗೆ ಏರಿಕೆಯಾಗಿದೆ.

ಮೇ 24ರಂದು ಗರಿಷ್ಠ ಹಾಲು ಶೇಖರಣೆಯಾಗುವ ಮೂಲಕ ಕೆಎಂಎಫ್ ಇತಿಹಾಸದಲ್ಲೇ ದಾಖಲೆ ನಿರ್ಮಾಣವಾಗಿದೆ.

2020ರ ಜುಲೈ 14ರಂದು 88.30 ಲಕ್ಷ ಕೆ.ಜಿ ಹಾಲು ಸಂಗ್ರಹಿಸುವ ಮೂಲಕ ಮೊದಲ ಬಾರಿಗೆ ದಾಖಲೆ ನಿರ್ಮಾಣವಾಗಿತ್ತು. 2021ರ ಜೂನ್‌ 11ರಂದು 90.62 ಲಕ್ಷ ಕೆ.ಜಿ ಹಾಲು ಶೇಖರಿಸುವ ಮೂಲಕ ಮತ್ತೊಂದು ದಾಖಲೆಯನ್ನು ಕೆಎಂಎಫ್ ನಿರ್ಮಿಸಿತ್ತು.

ಸಾಂಕ್ರಾಮಿಕ ಕಾಯಿಲೆ ತಡೆಗಟ್ಟಲು ಜಾನುವಾರುಗಳಿಗೆ ಲಸಿಕೆ, ಸಮತೋಲಿತ ಪಶು ಆಹಾರ ವಿತರಣೆ, ಕೊಟ್ಟಿಗೆಯ ನೆಲಹಾಸು ಬಳಕೆಗೆ ರಬ್ಬರ್ ಮ್ಯಾಟ್‍, ಮೇವು ಕಟಾವು ಯಂತ್ರಗಳ ವಿತರಣೆ, ಶುದ್ಧ ಹಾಲು ಉತ್ಪಾದನೆ ಮತ್ತು ಹೈನುರಾಸು ನಿರ್ವಹಣೆಗಾಗಿ ತರಬೇತಿ ನೀಡುತ್ತಿರುವುದರಿಂದ ಹಾಲು ಶೇಖರಣೆ ಹೆಚ್ಚಾಗುತ್ತಿದೆ ಎಂದು ಕೆಎಂಎಫ್‌ ತಿಳಿಸಿದೆ.

‘ದಿನಕ್ಕೆ ಸರಾಸರಿ 1 ಕೋಟಿ ಕೆ.ಜಿ.ಯಷ್ಟು ಹಾಲು ಶೇಖರಣೆ ಮಾಡುವ ಮಟ್ಟಕ್ಕೆ ಉತ್ಪಾದನಾ ವೇಗ ಹೆಚ್ಚಿಸುವ ಗುರಿ ಹೊಂದಲಾಗಿದೆ’ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು