ಹೂಡಿಕೆ: ಮುಂಚೂಣಿಗೆ ಬೆಂಗಳೂರು

ಬುಧವಾರ, ಮಾರ್ಚ್ 27, 2019
26 °C
ಆಸ್ತಿ ಸಲಹಾ ಸಂಸ್ಥೆ ನೈಟ್‌ ಫ್ರ್ಯಾಂಕ್‌ 2019ರ ವರದಿ ಬಿಡುಗಡೆ

ಹೂಡಿಕೆ: ಮುಂಚೂಣಿಗೆ ಬೆಂಗಳೂರು

Published:
Updated:
Prajavani

ಬೆಂಗಳೂರು: ಭವಿಷ್ಯದಲ್ಲಿ ಆಸ್ತಿಗಳ ಮೇಲೆ ಬಂಡವಾಳ ಹೂಡಿಕೆ ಆಕರ್ಷಿಸುವ ವಿಶ್ವದ ಪ್ರಮುಖ ಐದು ನಗರಗಳಲ್ಲಿ ಬೆಂಗಳೂರು ಮುಂಚೂಣಿಯಲ್ಲಿ ಇರಲಿದೆ ಎಂದು ಜಾಗತಿಕ ಆಸ್ತಿ ಸಲಹಾ ಸಂಸ್ಥೆ ನೈಟ್‌ ಫ್ರ್ಯಾಂಕ್‌ ಹೇಳಿದೆ.

ಬೆಂಗಳೂರು, ಹ್ಯಾಂಗ್‌ಝೋಹು, ಸ್ಟಾಕ್‌ಹೋಂ, ಕೇಂಬ್ರಿಜ್‌ ಮತ್ತು ಬಾಸ್ಟನ್‌ ನಗರಗಳು ಮುಂದಿನ ಐದು ವರ್ಷಗಳಲ್ಲಿ ಹೂಡಿಕೆದಾರರನ್ನು ಗಣನೀಯವಾಗಿ ಆಕರ್ಷಿಸಲಿವೆ ಎಂದು ನೈಟ್‌ ಫ್ರ್ಯಾಂಕ್‌, ತನ್ನ ಫ್ಯೂಚರ್‌ ಸಿಟೀಸ್‌ ವರದಿಯಲ್ಲಿ ತಿಳಿಸಿದೆ.

ಸಂಪತ್ತು ಸೃಷ್ಟಿ, ಸಂಪತ್ತಿನ ಮುನ್ನೋಟ ಮತ್ತು ಆರ್ಥಿಕ ಪ್ರಗತಿ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಭವಿಷ್ಯದ ನಗರಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಈ ಅಂಶಗಳು ನಗರಗಳ ಮೂಲಸೌಕರ್ಯ ಅಭಿವೃದ್ಧಿಯ ಜತೆಗೆ ಸರ್ವತೋಮುಖ ಬೆಳವಣಿಗೆಯನ್ನು ಸುಧಾರಿಸಲಿವೆ.

ಆಕ್ಸ್‌ಫರ್ಡ್‌ನ ಇಕನಾಮಿಕ್ಸ್‌ ಡೇಟಾ ಹೇಳುವಂತೆ, ಐದು ವರ್ಷಗಳಲ್ಲಿ ಬೆಂಗಳೂರಿನ ಜಿಡಿಪಿ ಶೇ 60ರಷ್ಟು ಬೆಳವಣಿಗೆ ಕಾಣಲಿದೆ. ಫ್ಲಿಪ್‌ಕಾರ್ಟ್‌, ಇನ್ಫೊಸಿಸ್‌ ಮತ್ತು ವಿಪ್ರೊದಂತಹ ದಿಗ್ಗಜ ಕಂಪನಿಗಳ ನೆಲೆಯಾಗಿದೆ. ಮೈಕ್ರೊಸಾಫ್ಟ್‌, ಹಿಟಾಚಿ ಮತ್ತು ಸ್ಯಾಮ್ಸಂಗ್‌
ನಂತಹ 400ಕ್ಕೂ ಅಧಿಕ ಬಹುಕೋಟಿ ಕಂಪನಿಗಳು ಇಲ್ಲಿ ನೆಲೆಯೂರಿವೆ.

ಬೆಂಗಳೂರಿನ ಶಿಕ್ಷಣ ಕ್ಷೇತ್ರದಲ್ಲಿಯೂ ಹಣ ಹೂಡಿಕೆ ಹೆಚ್ಚುತ್ತಿದೆ. ಈ ಮೂಲಕ ಜ್ಞಾನ ಆಧಾರಿತ ಆರ್ಥಿಕತೆಯ ಬೆಳವಣಿಗೆಗೆ ನಗರವು ಮಹತ್ವದ ಕೊಡುಗೆ ನೀಡುತ್ತಿದೆ. ಕೃತಕ ಬುದ್ಧಿಮತ್ತೆ, ಆಧುನಿಕ ತಂತ್ರಜ್ಞಾನ ಕಂಪನಿಗಳ ಬೆಳವಣಿಗೆ ಹೆಚ್ಚಾಗುತ್ತಿದೆ. ಈ ಸಂಗತಿಗಳಿಂದಾಗಿ ಭವಿಷ್ಯದ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನ ಪಡೆದುಕೊಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !