ಆಲಪ್ಪನಹಳ್ಳಿ(ಹೊಸಕೋಟೆ): ಪಶ್ಚಿಮ ಏಷ್ಯಾ ಸಂಘರ್ಷದಿಂದ ಬೋರ್ವೆಲ್ ಕೊರೆಸುವ ಅಗತ್ಯ ವಸ್ತುಗಳ ಬೆಲೆ ಗಣನೀಯ ಏರಿಕೆ ಕಂಡಿದೆ. ದರ ನಿಗದಿ ಸಂಬಂಧ ಬೋರ್ವೆಲ್ ವಾಹನ ಮಾಲೀಕರು ಮತ್ತು ಏಜೆಂಟರರ ನಡುವೆ ತೀವ್ರ ಜಟಾಪಟಿ ಆರಂಭವಾಗಿದ್ದು ಸೋಮವಾರ ಬೋರ್ವೆಲ್ ಮಾಲೀಕರು ಬೋರ್ ಕೊರೆಯುವ ವಾಹನಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದರು.

ದರ ಏರಿಕೆಗೆ ಬೋರ್ವೇಲ್ ವಾಹನ ಮಾಲೀಕರು ಪಟ್ಟುಹಿಡಿದರೆ, ಮೂರು ತಿಂಗಳ ಹಿಂದೆಯಷ್ಟೇ ದರ ಏರಿಕೆ ಮಾಡಲಾಗಿದೆ. ಮತ್ತೆ ದರ ಏರಿಕೆ ಮಾಡುವುದು ಬೇಡ ಎಂದು ಏಜೆಂಟರು ದರ ಏರಿಕೆ ವಿರೋಧಿಸಿದ್ದಾರೆ.

ತಾಲ್ಲೂಕಿನ ಆಲಪ್ಪನಹಳ್ಳಿ ಬಳಿ ಪೂರ್ವ ಕರ್ನಾಟಕ ಗ್ರಾಮೀಣ ರಿಗ್ ಮಾಲೀಕರು ಬೋರ್ವೆಲ್ ಲಾರಿಗಳನ್ನು ಒಂದೆಡೆ ನಿಲ್ಲಿಸಿ ಪ್ರತಿಭಟನೆ ನಡೆಸಿದರು. ಏಜೆಂಟರು ಹೊಸ ದರ ನಿಗದಿ ಮಾಡುವವರೆಗೆ ಪ್ರತಿಭಟನೆ ಮುಂದುವರೆಯುತ್ತದೆ ಎಂದು ಪಟ್ಟುಹಿಡಿದಿದ್ದಾರೆ.

ಇರಾನ್–ಅಮೆರಿಕ ಯುದ್ದದಿಂದ ಸದ್ಯ ಬಿಟ್, ಎಂಜಿನ್ ಆಯಿಲ್, ಹ್ಯಾಮರ್, ಕಾರ್ಮಿಕ ಹಾಗೂ ನಿರ್ವಹಣಾ ವೆಚ್ಚ ಶೇ30 ರಿಂದ 50ರಷ್ಟು ಹೆಚ್ಚಳವಾಗಿದೆ. ಇದರಿಂದ ರಿಗ್ ಮಾಲೀಕರು ಬೋರ್ವೆಲ್ ಲಾರಿಗಳ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ₹53 ಸಾವಿರ ಇದ್ದ ಬಿಟ್ ಕಳೆದ 15 ದಿನಗಳಲ್ಲಿ ₹78 ಸಾವಿರಕ್ಕೆ ಏರಿಕೆಯಾಗಿದೆ. ಇದರ ಬೆಲೆ ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ ಆಗಲಿದೆ. ಅಲ್ಲದೆ ಎಂಜಿನ್ ಆಯಿಲ್, ಡೀಸೆಲ್, ಪೈಪ್ಗಳು ಸೇರಿದಂತೆ ಎಲ್ಲಾ ವಸ್ತುಗಳು ಏರಿಕೆ ಕಂಡಿದೆ. ಚಾಲಕರಿಗೆ ಸಂಬಳ ಕೊಡಲು ಆಗುತ್ತಿಲ್ಲ. ಇದರಿಂದ ಮಾಲೀಕರು ಲಾರಿಗಳ ಸಾಲ ಕಟ್ಟಲು ಆಗುತ್ತಿಲ್ಲ. ಹೀಗಾಗಿ ಬೆಲೆ ಏರಿಕೆ ಅನಿವಾರ್ಯ. ಏಜೆಂಟರ ಜೊತೆ ಸಭೆ ನಡೆಸಿ ನಿರ್ಧಾರ ಮಾಡ್ತೇವೆ’ ಎಂದು ಬೋರ್ವೆಲ್ ವಾಹನ ಮಾಲೀಕ ಚನ್ನಕೇಶವ ತಿಳಿಸಿದರು.

ಪೆಟ್ರೋಲ್ ಬಂಕ್ಗಳಲ್ಲಿ ₹25 ಸಾವಿರಕ್ಕೆ ಮಾತ್ರ ಪ್ರತಿದಿನ ಲಾರಿಗಳಿಗೆ ಡೀಸೆಲ್ ನೀಡಲಾಗುತ್ತಿದೆ. ಬೋರ್ವೆಲ್ ಕೊರೆಸುವ ಬಿಡಿ ಭಾಗಗಳು ಚಿನ್ನದಂತೆ ಪ್ರತಿ ದಿನ ಏರಿಕೆ ಆಗುತ್ತಿದೆ. ಕಳೆದ ಮೂರು ತಿಂಗಳ ಹಿಂದೆ ಇದೇ ರೀತಿ ಪ್ರತಿಭಟನೆ ಮಾಡುವ ಮೂಲಕ ಒಂದು ಸಾವಿರ ಅಡಿಗೆ ಕೊರೆಯುವ ದರವನ್ನು ₹1.40ಲಕ್ಷದಿಂದ ₹1.60ಲಕ್ಷಕ್ಕೆ ಏರಿಕೆ ಮಾಡಿದ್ದೆವು. ಆದರೆ ಈಗ ಮತ್ತೆ ಬಿಡಿ ಭಾಗಗಳು ಏರಿಕೆ ಕಂಡಿವೆ. ಸಿಬ್ಬಂದಿಗೆ ಅಡುಗೆ ಮಾಡಲು ಗ್ಯಾಸ್ ಸಿಲಿಂಡರ್ ಸಹ ಸಿಗದೆ ಹೆಚ್ಚಿನ ಬೆಲೆಗೆ ಸಿಲಿಂಡರ್ ಖರೀದಿ ಮಾಡಬೇಕಾಗಿದೆ. ಈ ಎಲ್ಲಾ ಸಮಸ್ಯೆಗೆ ಪರಿಹಾರ ಬೋರ್ವೆಲ್ ಕೊರೆಸಲು ಹೊಸ ದರ ನಿಗದಿ ಮಾಡಬೇಕಿದೆ ಎಂದು ಬೋರ್ವೆಲ್ ಮಾಲೀಕ ಚರ್ಲಥನ್ ತಿಳಿಸಿದರು.

ಬೋರ್ವೆಲ್ ವಾಹನ ಮಾಲೀಕರಾದ ಶಾಂತಕುಮಾರ್, ಪ್ರಕಾಶ್, ಎಸ್ಎಲ್ಆರ್ ರಾಜ, ಷಷ್ಮುಗ, ಶಿವಣ್ಣ, ಕೃಷ್ಣಮೂರ್ತಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-15-170607252

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.