ಕೋಲಾರ: ತಿಂಗಳ ಹಿಂದೆ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಎಚ್ 125 ಲಘು ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕಕ್ಕೆ ಚಾಲನೆ ಸಿಕ್ಕ ಬೆನ್ನಲ್ಲೇ ತಾಲ್ಲೂಕಿನ ನರಸಾಪುರದಲ್ಲಿ ಜೆಸಿಬಿಯ ವಿಶ್ವದರ್ಜೆಯ ಅತ್ಯಾಧುನಿಕ ಸೌಲಭ್ಯದ ಘಟಕ ತಲೆ ಎತ್ತಿದೆ.

ಜೆಸಿಬಿ ಇಂಡಿಯಾದ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ದೀಪಕ್ ಶೆಟ್ಟಿ, ‘ಟ್ರೈಡೆಂಟ್ ಜೆಸಿಬಿ ಡೀಲರ್ಶಿಪ್ ಘಟಕ’ಕ್ಕೆ ಶುಕ್ರವಾರ ಚಾಲನೆ ನೀಡಿದರು.

ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜೆಸಿಬಿ ಮಾರಾಟ ಹಾಗೂ ಸರ್ವಿಸ್ಗೆ ಒತ್ತು ನೀಡುವ ಉದ್ದೇಶ ಹೊಂದಿದ್ದು, ವಿಶ್ವದರ್ಜೆಯ ಸೌಲಭ್ಯ ಇದಾಗಿದೆ. 33,750 ಚದರ ಅಡಿ ಜಾಗದಲ್ಲಿ ಈ ಸೌಲಭ್ಯ ನಿರ್ಮಿಸಲಾಗಿದೆ. ಸರ್ವಿಸ್ಗಾಗಿ 3 ಸುಸಜ್ಜಿತ ಸರ್ವಿಸ್ ಬೇಗಳು, ವರ್ಕ್ಶಾಪ್, ಬಿಡಿಭಾಗಗಳ ವ್ಹೇರ್ಹೌಸ್ ಹೊಂದಿದೆ. ಆರು ಮೊಬೈಲ್ ಸರ್ವಿಸ್ ವ್ಯಾನ್ ಹೊಂದಿದ್ದು, ಗ್ರಾಹಕರ ಬಳಿಗೆ ಹೋಗಿ ಸೇವೆ ನೀಡಲಿದ್ದಾರೆ. ನುರಿತ ಎಂಜಿನಿಯರ್ಗಳು ಲಭ್ಯರಿರುತ್ತಾರೆ. ಈ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ’ ಎಂದರು.

ಕೋಲಾರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಗ್ರಾಹಕರಿಗೆ ಬಿಡಿಭಾಗಗಳು ಮತ್ತು ತಾಂತ್ರಿಕ ಸೇವೆಗಳು ಸುಲಭವಾಗಿ ಲಭ್ಯವಾಗಲಿವೆ. ಜಿಲ್ಲೆಯೊಂದರಲ್ಲೇ ಸದ್ಯ 1,052 ಜೆಸಿಬಿ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ಗ್ರಾಹಕರು ಅಮೆಜಾನ್ನಂತಹ ಆ್ಯಪ್ಗಳ ಮೂಲಕವೇ ಜೆಸಿಬಿ ಬಿಡಿಭಾಗಗಳಿಗೆ ಬೇಡಿಕೆ ಇಡಬಹುದು. 'ಜೆಸಿಬಿ ದಕ್ಷ್' ಸಿಮ್ಯುಲೇಟರ್ ಮೂಲಕ ಯಂತ್ರ ಆಪರೇಟರ್ಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

ಟ್ರೈಡೆಂಟ್ ಜೆಸಿಬಿ ನಿರ್ದೇಶಕ ಧ್ರುವ್ ಚೌಧರಿ, ‘ಕೋಲಾರದಲ್ಲಿನ ಈ ಹೊಸ ಘಟಕವು 350ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಲಿದೆ. ಈ ಭಾಗದ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-18-150601541

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.