ಬೆಂಗಳೂರು: ಕರ್ನಾಟಕ ರಾಜ್ಯ ತೆಂಗಿನ ನಾರು ಅಭಿವೃದ್ಧಿ ನಿಗಮವು (ಕೆಎಸ್ಸಿಡಿಸಿಎಲ್) ರಾಜಸ್ಥಾನದ ಜೈಪುರದಲ್ಲಿ ಹೊಸ ಮಳಿಗೆಯನ್ನು ತೆರೆದಿದ್ದು, ಶನಿವಾರ ಉದ್ಘಾಟನೆಗೊಂಡಿತು.

ಜೈಪುರದ ರಾಜಪಥ್ ರಸ್ತೆ, ಮಾನಸ ಸರೋವರದಲ್ಲಿ ‘ಕಲ್ಪಕೃತಿ’ ನಾರು ಉತ್ಪನ್ನಗಳನ್ನು ಮಾರಾಟ ಮಾಡಲು ಬಗಾಯತ್ ವೆಂಚರ್ಸ್ ಎಲ್ಎಲ್ಪಿ ಸಹಯೋಗದೊಂದಿಗೆ ಮಳಿಗೆ ಪ್ರಾರಂಭಿಸಲಾಯಿತು.ಬಗಾಯತ್ ವೆಂಚರ್ಸ್ ಎಲ್ಎಲ್ಪಿ ಸಂಸ್ಥೆಯು ರಾಜಸ್ಥಾನ, ನವದೆಹಲಿ ಮತ್ತು ಗುಜರಾತ್ ರಾಜ್ಯಗಳಿಗೆ ವಿತರಕರೂ ಆಗಿದ್ದಾರೆ ಎಂದು ಕೆಎಸ್ಸಿಡಿಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಪ್ರಮುಖ ಉದ್ದಿಮೆಯಾಗಿರುವ ಕೆಎಸ್ಸಿಡಿಸಿಎಲ್ ರಾಜ್ಯದಲ್ಲಿ 35 ಉತ್ಪಾದನಾ ಕೇಂದ್ರಗಳನ್ನು ಹೊಂದಿದೆ. ಡಚ್ ಮ್ಯಾಟ್, ಕಾರಿಡಾರ್ ಮ್ಯಾಟ್, ರೋಲಿಂಗ್ ಮ್ಯಾಟ್, ಹಗ್ಗ, ತೆಂಗಿನ ನಾರಿನ ಪುಡಿ, ಜಿಯೋ-ಟೆಕ್ಸ್ಟೈಲ್ಸ್, ಹಾಸಿಗೆಗಳು ಮತ್ತು ಡೆಸ್ಕ್ಗಳಂತಹ ನಾರಿನ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ. ಇವುಗಳನ್ನು ‘ಕಲ್ಪಕೃತಿ’ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡುತ್ತಿದೆ.

ಕಾರ್ಯಕ್ರಮದಲ್ಲಿ ಕೆಎಸ್ಸಿಡಿಸಿಎಲ್ ಅಧ್ಯಕ್ಷ ನಟರಾಜ್ ಜಾನಕಿರಾಮ್, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಬಿ.ಸಿ. ಮುದ್ದು ಗಂಗಾಧರ, ರಾಜಸ್ಥಾನದ ತರಬೇತಿ ವಿಭಾಗದ ಎಡಿಜಿಪಿ ಎಚ್.ಜಿ.ಆರ್. ಸುಹಾಸ್, ರಾಜಸ್ಥಾನದ ಭಯೋತ್ಪಾದನಾ ನಿರೋಧಕ ಪಡೆಯ ಎಡಿಜಿಪಿ ಎಂ.ಎನ್. ದಿನೇಶ್, ಕೆಎಸ್ಸಿಡಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-51-1884601245

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.