ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್ ವಹಿವಾಟು ಉಪಕ್ರಮಕ್ಕಾಗಿ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತವು (ಕೆಎಸ್ಡಿಎಲ್) ಝೆಪ್ಟೋ ಕಂಪನಿಯ ‘ಪೂರೈಕೆ ಸರಪಳಿ ಉತ್ಕೃಷ್ಟತಾ ಪುರಸ್ಕಾರ’ಕ್ಕೆ ಪಾತ್ರವಾಗಿದೆ.

ಸಂಸ್ಥೆಯ ಸಾಧನೆಯನ್ನು ಅಭಿನಂದಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ‘ಮೂರು ವರ್ಷಗಳ ಹಿಂದೆ ಕೆಎಸ್ಡಿಎಲ್ ಇ-ಕಾಮರ್ಸ್ ವಹಿವಾಟು ₹28 ಕೋಟಿ ಇತ್ತು. ದಿಟ್ಟ ಮಾರುಕಟ್ಟೆ ವಿಸ್ತರಣೆ ನಿರ್ಧಾರದ ಫಲವಾಗಿ ಈಗ ₹122 ಕೋಟಿ ತಲುಪಿದೆ. ಸಂಸ್ಥೆಯು ತನ್ನ ಪರಂಪರೆ ಮತ್ತು ನಂಬಿಕೆಗಳನ್ನು ಬಿಟ್ಟುಕೊಡದೆ, ಇ-ಕಾಮರ್ಸ್ ಮತ್ತು ಕ್ವಿಕ್ ಕಾಮರ್ಸ್ ವಹಿವಾಟು ವ್ಯವಸ್ಥೆಗಳನ್ನು ಅಳವಡಿಸಿಕೊಂಡು ಯಶಸ್ಸು ಸಾಧಿಸಿದ್ದಕ್ಕೆ ಪ್ರತಿಫಲವಾಗಿ ಪ್ರಶಸ್ತಿ ಲಭಿಸಿದೆ’ ಎಂದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-4-1339431907

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.